ಪ್ಯಾನ್ ಕೇಕ್, ದ್ರಾಕ್ಷಿ, ಸ್ಟ್ರಾಬೆರ್ರಿ, ರಾಸ್ಬೆರ್ರಿ ಎಲ್ಲ ಸೇರಿ ಆದ ನಮ್ಮ ಕರಡಿ ಮರಿ ಇಲ್ಲಿದೆ. ನಿಮಗಿದು ಕರಡಿ ತರ ಕಾಣತ್ತೋ ಇಲ್ವೋ, ನಿಶು ಅಂತೂ ಇದು ಕರಡೀನೇ ಅಂತ ಒಪ್ಪಿಕೊಂಡಿದಾನೆ. ಹೀಗಾಗಿ ಬೆಳಗಿನ ತಿಂಡಿ ಅಷ್ಟು ಅರಾಮವಾಗಿ ಹೊಟ್ಟೆಗಿಳಿಯದ `ಸ್ಪೆಷಲ್ ದಿನ'ಗಳಲ್ಲಿ, ಅಮ್ಮನ ಮ್ಯಾಜಿಕ್‍ನಿಂದ ಪ್ಲೇಟ್ ಮೇಲೆ ಪ್ರತ್ಯಕ್ಷವಾಗೋ ಈ ಕ್ರಿಯೇಚರ್‍ಗಳು ನಿಶು ಮುಖದಲ್ಲಿ ನಗು ತುಂಬುತ್ತಾ, ಅವನ ಹೊಟ್ಟೆಯೂ ತುಂಬೋ ಹಾಗೆ ಮಾಡತ್ವೆ.
ಕರಡಿ ತಿಂಡಿ ತಿಂದ್ರೆ ಸಾಕ? ಕರಡಿ ಹಾಡು ಬೇಡ್ವ? .....ಇಲ್ಲಿದೆ ನೋಡಿ ಕರಡಿ ಹಾಡು. ವೀಡಿಯೋ ಕ್ವಾಲಿಟಿ ಅಷ್ಟು ಚೆನ್ನಾಗಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ...ಸರೀನಾ?
ಇಂಗ್ಲಿಷ್‍ನಲ್ಲಿರೋ ಈ ಕರಡಿ ಹಾಡು ಕನ್ನಡದಲ್ಲಿ ಹೀಗಾಗಬಹುದೇನೋ ಅನ್ನಿಸ್ತು. ನಿಮಗೆ ಏನನ್ನಿಸ್ತು? ಕನ್ನಡದಲ್ಲಿ ಈ ಮುಂಚೇನೂ, ಸುಮಾರು ಹೀಗೇ ಇದ್ದ ಕರಡಿ ಹಾಡೊಂದು ಎಲ್ಲೋ ಕೇಳಿದ್ದ ನೆನಪು. ನಿಮ್ಮಲ್ಲಿ ಯಾರಿಗಾದ್ರೂ ಆ ಹಾಡು ಗೊತ್ತಿದ್ರೆ ತಿಳಿಸಿ.