ಕಳೆದ ಅಕ್ಟೊಬರ್‍ನಲ್ಲಿ ಒಂದು ದಿನ ಸ್ಕೂಲ್‍ಬಸ್ ಹತ್ತಿ, ನಿಶು ಮತ್ತವನ ಒಂದಷ್ಟು ಸ್ನೇಹಿತರು ಕುಂಬಳಕಾಯಿ ತರಲಿಕ್ಕೆ ಅಂತ ಇಲ್ಲೊಂದು ಫಾರ್ಮ್‍ಗೆ ಹೋಗಿದ್ರು. ಅಲ್ಲಿ ಕುಂಬಳಕಾಯಿಯ ಜೊತೆಗೇ ಬೇರೆ ಬೇರೆ ತರಕಾರಿಗಳೂ ಇದ್ವು. ಹತ್ತಿರ ಹೋಗಿ ಮುಟ್ಟಬಹುದಾದ ಪುಟಾಣಿ ಮರಿಗಳಿರುವ pet zoo ಇತ್ತು. ಟ್ರಾಕ್ಟರ್ ಹತ್ತಿ, ಹುಲ್ಲಿನ ಪಿಂಡಿಗಳ ಮೇಲೆ ಕುಳಿತು ಫಾರ್ಮ್ ಪೂರಾ ಸುತ್ತಿ ಸುಸ್ತಾಗಿ, ಮನೆಯಿಂದ ತಂದ ಬುತ್ತಿ ತಿಂದು ಇವರೆಲ್ಲ ಮತ್ತೆ ಬಸ್ ಹತ್ತಿ ಕುಳಿತು, ತಮ್ಮ ತಮ್ಮ ಅಮ್ಮನನ್ನೋ ಅಪ್ಪನನ್ನೋ ಒರಗಿಕೊಂಡು ತೂಕಡಿಸುತ್ತಾ ಮನೆಗೆ ಬಂದು ಸೇರಿದ್ದಾಯ್ತು. ಆಮೇಲೆ ನಿಶು ಮನೇಲಿ ಮೂರ್ನಾಲ್ಕು ದಿನ ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಮಜ್ಜಿಗೆಹುಳಿ, ಕುಂಬಳಕಾಯಿ ಪೈ....ಅಯ್ಯೋ ಹೋಗ್ಲಿ ಸಾಕು ಬಿಡಿ....ಈಗ ಫೋಟೋ ನೋಡ್ಬಿಡಿ.
ಕೋಳಿಮರಿ, ಕೋಳಿಮರಿ...ಕಾಳು ಬೇಕೇ?
ಕಾಳು ಬೇಕು, ಕೂಳು ಬೇಕು...ಎಲ್ಲ ಬೇಕು
ಕುರೀಮರೀಗೂನು ಈಗ ಹಸಿವು ಆಗಿದೆ
ಮೇಕೆಮರಿಯೂ ಬಾಯಿ ಹಾಕಿ ಹುಲ್ಲು ತಿಂತಿದೆ
************
ಹಲೋ...ನನ್ಹೆಸ್ರು ಕುಂಬಳ ಅಂತ. ಬನ್ನಿ ಬನ್ನಿ .............
ಟ್ರಾಕ್ಟರ್ ಸವಾರೀಗೆ ರೆಡೀನಾ?
ಟ್ರಾಕ್ಟರ್ ಸವಾರಿ ಏನ್ ಗಮ್ಮತ್ತಪ್ಪಾ....ಮಜಾ ಅಂದ್ರೆ ಮಜಾ.........
ಅಮ್ಮಾ ಅಮ್ಮಾ....ಅದೇನು?
ಇದಕ್ಕೆ ಕಾಲಿಫ್ಲವರ್ ಅಂತ ಯಾಕಂತಾರೆ?
ಪಂಪ್‍ಕಿನ್ ಪ್ಯಾಚ್ ಬಂತು!................
ಹೀಗೆ ಬಗ್ಗಿ, ಎರಡೂ ಕೈಯಲ್ಲಿ ಹಿಡಿದು....
ಕುಂಬಳಕಾಯಿ ಎತ್ಕೋಬೇಕು.
ಆಮೇಲೆ, ಹೀಗೆ ನಿಧಾನಕ್ಕೆ ಎತ್ಕೊಂಡು ಹೋಗಿ....
ಅಮ್ಮಂಗೆ ಕೊಡ್ಬೇಕು.
ಬಾಯ್ ಬಾಯ್ ಪಂಪ್ಕಿನ್ ಪ್ಯಾಚ್.....
ಅಮ್ಮಾ, ಕುಂಬಳಕಾಯಿ ಇಲ್ಲೇ ಇಟ್ಟು ಮಾರೋಣ್ವಾ?
ನೋಡು ಎಷ್ಟು ಜನ ಗಿರಾಕಿಗಳಿದಾರೆ ಇಲ್ಲಿ!