ಇನ್ನೂ ವರ್ಷವೂ ತುಂಬಿರದಿದ್ದ ನಿಶೂನ ಈ ಪುಟ್ಟ ಪಾದಗಳ ಒಂದೊಂದೇ ಬೆರಳು ಹಿಡಿದು, ‘ದಿಸ್ ಲಿಟಲ್ ಪಿಗ್ಗಿ...’ ಎಂದು ನಾನು ಹಾಡುತ್ತಿದ್ದಾಗ, ದೂರಿಯಾಡುತ್ತಾ ತನ್ನ ಕಾಲ್ಬೆರಳುಗಳನ್ನ ತಾನೂ ಹಿಡಿಯುವ ಆಟ ಆಡುತ್ತಿದ್ದ ಈ ಮಗುವಿಗೆ ಮುಂದಿನ ತಿಂಗಳಿಗೆ ನಾಲ್ಕು ವರ್ಷ ತುಂಬಲಿದೆ. ಈಗಲೂ ನಿಶೂಗೆ ಈ ಹಾಡು ಇಷ್ಟ. ಅಮ್ಮನೋ, ಅಪ್ಪನೋ ತನ್ನ ಕೈ, ಕಾಲು ಬೆರಳಿನ ಉಗುರು ಕತ್ತರಿಸುವಾಗ ತಾನೇ ಹಾಡುತ್ತಾನೆ. ಅಮ್ಮನ ದೆಸೆಯಿಂದ ಈ ಲಿಟಲ್ ಪಿಗ್ಗಿ ಈಗ ಹಂದಿಮರಿ ಆಗಿರೋದಲ್ಲದೆ, ಇಂಗ್ಲಿಷ್ ರೈಮ್‍ನಲ್ಲಿ ಅತ್ತ ಹಾಗೆ ವೀ ವೀ ಅಂತ ಅಳದೆ, ಕನ್ನಡದಲ್ಲಿ ಆನಂದವಾಗಿ ಅಹ್ಹಹ್ಹಹ್ಹಾ...ಅಂತ ಅಟ್ಟಹಾಸ ಮಾಡ್ತಿದೆ. ನೀವೇ ನೋಡಿ ಬೇಕಿದ್ರೆ....
This little piggy went to market,
This little piggy stayed at home,
This little piggy had some pizza,
This little piggy had none.
And this little piggy went 'Wee wee wee' all the way home...
ಈ ಹಂದಿಮರಿ ಹೋಯ್ತು ಮಾರುಕಟ್ಟೆಗೆ
ಈ ಹಂದಿಮರಿ ಉಳೀತು ಮನೆಯೊಳಗೆ
ಈ ಹಂದಿಮರಿ ತಿಂತು ಕಡ್ಲೆ-ಬೆಲ್ಲ
ಈ ಹಂದಿಮರೀಗ್ ಪಾಪ ಏನೂ ಇಲ್ಲ
ಈ ಹಂದಿಮರಿ ಯಾಕೊ ಸುಮ್‍ಸುಮ್ನೆ ನಗ್ತಾ ಇತ್ತು
ಅಹ್ಹಹ್ಹಹ್ಹ ಹಹ್ಹಹ್ಹಹ್ಹ ಹಾ!
***
ವೀಡಿಯೋನೂ ನೋಡ್ತೀರ?