ನಿಶು ಅಮ್ಮನಿಗೆ ನಿಂತಲ್ಲಿ ಕೂತಲ್ಲಿ ಹಾಡು ಗುನುಗುತ್ತಾ ಇರೋ ಅಭ್ಯಾಸ. ಹಾಗೆ ಅಮ್ಮ ಗುನುಗೋ ಭಾವಗೀತೆ, ಚಿತ್ರಗೀತೆ, ವಚನ, ದೇವರನಾಮ ಎಲ್ಲವನ್ನೂ ಸಲೀಸಾಗಿ ಕದ್ದು ಇದ್ದಕ್ಕಿದ್ದಂತೆ ಒಂದು ದಿನ ಪೂರಾ ಹಾಡು ಹೇಳಿ ಅಮ್ಮ, ಅಪ್ಪ ಇಬ್ಬರಿಗೂ ಸರ್ಪ್ರೈಸ್ ಕೊಡೋದು ನಿಶು ಹವ್ಯಾಸ. ಹಾಡಿನ ಜೊತೆಗೆ, ಎಲ್ಲ ಹಾಡನ್ನೂ ಡ್ಯಾನ್ಸ್ ಮಾಡುತ್ತಾ ಹೇಳೋದು ಅದು ಹ್ಯಾಗೋ ನಿಶೂಗೆ ತುಂಬಾ ತುಂಬಾ ಇಷ್ಟ. ಹೀಗಾಗಿ ಕಲಿತ ಹಾಡಿಗೆಲ್ಲ ಅರ್ಥ ಕೇಳಿ ತಾನೇ ಕೋರಿಯೋಗ್ರಫಿ ಮಾಡಿಕೊಳ್ಳೋದುಂಟು. ಇವನ ಈ ಹಾಡು, ಅಭಿನಯ, ಅರ್ಥವಂತಿಕೆಯೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳೋ ಖುಷಿ ನನ್ನದು!
ಬಸವಣ್ಣನವರ ಈ ವಚನ ನನಗೂ ನಿಶೂಗೂ ತುಂಬಾ ಇಷ್ಟ. ಅಭಿನಯಿಸುತ್ತಾ ಹೇಳುವಾಗ, ಅರ್ಥ ವಿವರಿಸುವಾಗ ಅದು ಹ್ಯಾಗೋ ಮಧ್ಯ ನುಸುಳುತ್ತಿದ್ದ ಸಿಲ್ಲಿ ಗಿಗಲ್‍ಗಳಿಗೆಲ್ಲ ಕತ್ತರಿ ಹಾಕಿದ್ದಾಗಿದೆ. `ಕಲಬೇಡ ಕೊಲಬೇಡ' ಅಂತ ಹಾಡುತ್ತಾ ಮಧ್ಯೆ ಮಧ್ಯೆ ನಿಶು ಮೂಗಿಗೆ ಬೆರಳಿಡಲು ಶುರು ಮಾಡುತ್ತಿದ್ದಂತೆ `ಮೂಗೊಳಗೆ ಬೆರಳಿಡಬೇಡ' ಅಂತ ಅಮ್ಮ ಹಾಡಿದ್ದೂ ಎಡಿಟ್ ಆಗಿದೆ. ಈಗ ನೀವೂ ಈ ವಚನ ಕೇಳಿ, ನೋಡಿ......
ದೀಪಾವಳಿ ಶುಭಾಶಯಗಳು ನಿಮ್ಮೆಲ್ರಿಗೂ....