ನಿಶು ಅಮ್ಮನಿಗೆ ನಿಂತಲ್ಲಿ ಕೂತಲ್ಲಿ ಹಾಡು ಗುನುಗುತ್ತಾ ಇರೋ ಅಭ್ಯಾಸ. ಹಾಗೆ ಅಮ್ಮ ಗುನುಗೋ ಭಾವಗೀತೆ, ಚಿತ್ರಗೀತೆ, ವಚನ, ದೇವರನಾಮ ಎಲ್ಲವನ್ನೂ ಸಲೀಸಾಗಿ ಕದ್ದು ಇದ್ದಕ್ಕಿದ್ದಂತೆ ಒಂದು ದಿನ ಪೂರಾ ಹಾಡು ಹೇಳಿ ಅಮ್ಮ, ಅಪ್ಪ ಇಬ್ಬರಿಗೂ ಸರ್ಪ್ರೈಸ್ ಕೊಡೋದು ನಿಶು ಹವ್ಯಾಸ. ಹಾಡಿನ ಜೊತೆಗೆ, ಎಲ್ಲ ಹಾಡನ್ನೂ ಡ್ಯಾನ್ಸ್ ಮಾಡುತ್ತಾ ಹೇಳೋದು ಅದು ಹ್ಯಾಗೋ ನಿಶೂಗೆ ತುಂಬಾ ತುಂಬಾ ಇಷ್ಟ. ಹೀಗಾಗಿ ಕಲಿತ ಹಾಡಿಗೆಲ್ಲ ಅರ್ಥ ಕೇಳಿ ತಾನೇ ಕೋರಿಯೋಗ್ರಫಿ ಮಾಡಿಕೊಳ್ಳೋದುಂಟು. ಇವನ ಈ ಹಾಡು, ಅಭಿನಯ, ಅರ್ಥವಂತಿಕೆಯೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳೋ ಖುಷಿ ನನ್ನದು!
ಬಸವಣ್ಣನವರ ಈ ವಚನ ನನಗೂ ನಿಶೂಗೂ ತುಂಬಾ ಇಷ್ಟ. ಅಭಿನಯಿಸುತ್ತಾ ಹೇಳುವಾಗ, ಅರ್ಥ ವಿವರಿಸುವಾಗ ಅದು ಹ್ಯಾಗೋ ಮಧ್ಯ ನುಸುಳುತ್ತಿದ್ದ ಸಿಲ್ಲಿ ಗಿಗಲ್‍ಗಳಿಗೆಲ್ಲ ಕತ್ತರಿ ಹಾಕಿದ್ದಾಗಿದೆ. `ಕಲಬೇಡ ಕೊಲಬೇಡ' ಅಂತ ಹಾಡುತ್ತಾ ಮಧ್ಯೆ ಮಧ್ಯೆ ನಿಶು ಮೂಗಿಗೆ ಬೆರಳಿಡಲು ಶುರು ಮಾಡುತ್ತಿದ್ದಂತೆ `ಮೂಗೊಳಗೆ ಬೆರಳಿಡಬೇಡ' ಅಂತ ಅಮ್ಮ ಹಾಡಿದ್ದೂ ಎಡಿಟ್ ಆಗಿದೆ. ಈಗ ನೀವೂ ಈ ವಚನ ಕೇಳಿ, ನೋಡಿ......
ದೀಪಾವಳಿ ಶುಭಾಶಯಗಳು ನಿಮ್ಮೆಲ್ರಿಗೂ....
11 comments:
ಮಸ್ತಾಗಿದೆ. Thank you.
ಇಷ್ಟು ಸಣ್ಣ ವಯಸಿನ್ನಲ್ಲೇ ವಚನ ಮತ್ತದರ ಅರ್ಥ ಎಲ್ಲಾ ಹೇಳುವ ನಿಶೂಮರಿಗೂ ಅದನ್ನು ಅವನಿಗೆ ಹೇಳಿ ಕೊಡುವ ನಿಮಗೂ ಹ್ಯಾಟ್ಸ್ ಆಫ್ ಮೀರಾ!!
ನೀವು ಕೂಡ ಬಹಳ ಸೊಗಸಾಗಿ ಹಾಡ್ತೀರ:)
-ರೂpaश्री
ಮೀರಾರವರಿಗೆ,
ನಿಶು ತುಂಬಾ ಚೆನ್ನಾಗಿ ವಚನ ಹೇಳಿದ್ದಾನೆ,ಅರ್ಥದೊಂದಿಗೆ. ನೀವೂ ತುಂಬಾ ಚೆನ್ನಾಗಿ ಹಾಡ್ತೀರ:-).
ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಪಿ ಎಸ್ ಪಿ .
ವಚನವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಿ ಮಗುವಿಗೆ. ಈ ವಚನದ ‘ಬೇಡ’ಗಳು ಮಕ್ಕಳಿಗೆ ನಿಜಕ್ಕೂ ಪರಿಣಾಮಕಾರಿಯಾದ ಪಾಠ. ಮತ್ತು ನಮಗೂ.
ನೀವು ಕೊನೆಯಲ್ಲೆಲ್ಲೊ ‘ನಟ್ ಭೈರವ್’ ಸ್ಪರ್ಶ ಮಾಡಿದ ಹಾಗಿದೆ.
-ಚಿನ್ಮಯ.
So cuuuuuuute... :-)
ಅರೆ...! ನಿಶು ಅಮ್ಮಾನೂ ಸಕತ್ತಾಗೇ ಹಾಡ್ತಾರೆ. ಧ್ವನಿ ತುಂಬಾ ಇಷ್ಟ ಆಯ್ತು ಅಂತ ಅಮ್ಮನಿಗೆ ಹೇಳು ಪುಟ್ಟಾ...
Nishu mari tumba.....tumba... Chennai hadiddu, dance madi thorisidu mathu vachanada aartha vivarisiddu nammellara mana midide.
Nishu amma thumba chennai hadu helidare hagu maguvige badukina aartha vannu E vachanada mulaka kalisiddare.
Nimage namma vandanegalu
Yoga, Rashmi & Putani Pranav
ಮೀರಾ, ಜಸ್ಟ್ ವಂಡರ್'ಫುಲ್....
ನಿಶು ಮತ್ತು ನಿಮ್ಮ ಇಬ್ಬರ ಹಾಡುಗಳು ಬಹಳನೇ ಇಷ್ಟ ಆದ್ವು.
It is excellent. Wish more mothers could spend time to teach their kids in this manner. Hearty congrats, nishu and nishu's amma!!
Hi Nishu,
Ani Anna here. Sakattagide kano ninna hadu. Innu Swalpa hadu, danceoo madu, nodteeni.
Bye
Anirudh
adbutavaagide..
Post a Comment