ಇವನ ಪ್ರಶ್ನೆಗೆ ನಾನು ಉತ್ತರಿಸೋ ಮೊದಲೇ ಅಂಕಲ್ ಇವನನ್ನ ಎತ್ತಿ, ಮುದ್ದಾಡಿ, ಚೆಂಡಾಡಿ, ಕೊಂಡಾಡಲು ಶುರುವಿಟ್ಟಾಗಿತ್ತು.
ಇವರಿಬ್ಬರ ಈ ಅಮೃತ ಘಳಿಗೆಯನ್ನ ಕಣ್ಣ ತುಂಬಾ ನೋಡೋದೋ, ಕ್ಯಾಮರಾದಲ್ಲಿ ಸೆರೆ ಹಿಡಿದುಬಿಡೋದೋ ಗೊತ್ತಾಗದೆ, ಅಂತೂ ಕ್ಯಾಮೆರಾ ಕೈಗೆತ್ತಿಕೊಂಡರೆ, ಮೆಮೋರಿ ಫುಲ್ಲಾಗಿ ........`live view' ಇಲ್ಲದೆ....... ಅಂತೂ ಕಷ್ಟ ಪಟ್ಟು ತೆಗೆದ ಒಂದಷ್ಟು ಚಿತ್ರಗಳಲ್ಲಿ, ಕೆಲವು ಇಲ್ಲಿವೆ. ಹಿಂದೆ ಬ್ಯಾಕ್‍ಲೈಟ್ ಬೇರೆ ಇದ್ದು, ಏನೂ ಕಾಣೀಸದೇ ಇದ್ದ ಚಿತ್ರಗಳಲ್ಲೂ ಅಷ್ಟಿಷ್ಟು ಕೈಯ್ಯಾಡಿಸಿ ಹಾಕಿದ್ದೇನೆ.
ನಿಶೂನ ಅತ್ತೆ ತೆಗೆದ ಒಂದು ಚಿತ್ರ, ಜೊತೆಗೆ ಜಯಂತ್ camera ದಲ್ಲಿ ಪ್ರಸನ್ನ ಅವರು ತೆಗೆದ ಒಂದು ಚಿತ್ರ ಕೂಡ ಇಲ್ಲಿದೆ.
........ಹತ್ರ ಹೋಗಿ, ಗುಟ್ಟು ಹೇಳಿ...........
.........ಸಿಕ್ಕೇಬಿಟ್ಟ ಅನ್ನುವಾಗ..ನಾನೇನ್ಮಾಡ್ತೀನ್ ಗೊತ್ತಾ?.......
.......ಹಾಗೇ ಹಿಂದಕ್ಕೆ ಬಗ್ಗಿ.................
........ಪಲ್ಟಿ ಹಾಕಿಬಿಡ್ತೀನಿ........
..... ನಾನೇ ಗೆದ್ದಿದ್ದೂ!!!
ಜಯಂತ್ ಅಂಕಲ್ ಅಮ್ಮಂಗೂ ಫ್ರೆಂಡ್ ಅಂತೆ...
ಅತ್ತೆ, ಮಾವಾನೂ ಅವರ ಜೊತೆ ಫೋಟೋ ತೆಗೆಸಿಕೊಂಡ್ರು....
ಆದ್ರೆ ಅವ್ರು ನನ್ ಜೊತೇನೇ ಜಾಸ್ತಿ ಫೋಟೋ ತೆಗೆಸಿಕೊಂಡಿದ್ದು
ಎಲ್ಲಾರ್ಗಿಂತ ಅವ್ರು ನಂಗೇ ಜಾಸ್ತಿ ಫ್ರೆಂಡು
ಜಯಂತ್ ಅಂಕಲ್‍ನೇ ಕೇಳಿ ನೋಡಿ ಬೇಕಿದ್ರೆ!
*******
Special thanks to :
ನಿಶು ಬ್ಲಾಗಲ್ಲಿ ಈ ಚಿತ್ರಗಳನ್ನ ಹಾಕಬಹುದಾ ಅಂತ ಕೇಳಿದ್ದಕ್ಕೆ, ಒಂಚೂರೂ ತಡಮಾಡದೆ `ಓಕೆ' ಹೇಳಿದ ಜಯಂತ್ ಮತ್ತು ಸ್ಮಿತಾಗೆ.
7 comments:
ವಾವ್ ! ಚೆನ್ನಾಗಿದೆ :)
ನನ್ ಫೇವರೇಟ್ ರೈಟರ್ ನನ್ ಫೇವರೇಟ್ ಬ್ಲಾಗಲ್ಲಿ.. ಸುಪ್ಪರೋ ಸುಪ್ಪರು..! :-)
ವಾಹ್, ನಿಶು ಮರಿ ಭಾಳ ಲಕ್ಕಿ:)) ಫೋಟೋಸ್ ಹಂಚಿಕೊಂಡಿದ್ದಕ್ಕೆ ವಂದನೆಗಳು!!
ಚುಪ್ಪರ್!ಮಸ್ತ್ ಮಸ್ತ್!
ವೂಹೂ ಸಖತ್!!!! ಕ್ಯೂಟ್:)
ಫೋಟೊಗಳು ತುಂಬಾ ಚೆನ್ನಾಗಿವೆ. ನಿಮ್ಮ ಮಗು ಮುದ್ದಾಗಿದೆ. ಜಯಂತ್ ಮಕ್ಕಳ ಮನಸ್ಸನ್ನು ಗೆಲ್ಲುವುದರಲ್ಲಿ ನಿಪುಣರು ಅನ್ನಿಸುತ್ತದೆ.
ಇತ್ತೀಚೆಗೆ ಮದುವೆಯೊಂದರಲ್ಲಿ ಜಯಂತರನ್ನು ಚಿಕ್ಕ ಮಕ್ಕಳೆರಡು ಬಂದು ನೀವು ಜಯಂತ್ ಕಾಯ್ಕಿಣಿಯಾ? ಎಂದು ಕೇಳಿದವು. ಜಯಂತ್ ಥಟ್ಟನೆ ಮಿಲಿಟರಿ ಶೈಲಿಯಲ್ಲಿ "ಯೆಸ್ ಸರ್" ಎಂದು ಸೆಲ್ಯೂಟ್ ಮಾಡಿಬಿಟ್ಟರು. ಆ ಕ್ಷಣಕ್ಕೆ ಆ ಮಕ್ಕಳ ಕಣ್ಣಿನಲ್ಲಿ ಉಂಟಾದ ಹೊಳಪನ್ನು ನಾನು ಯಾವತ್ತೂ ಮರೆಯಲಿಕ್ಕಿಲ್ಲ. ಬಹುಶ: ಆ ಮಕ್ಕಳಿಗೂ ಅದು ಬಹುದಿನಗಳವರೆಗೆ ನೆನಪಿನಲ್ಲುಳಿದಿರಬಹುದು.
-ಚಿನ್ಮಯ.
:):)
Post a Comment