Wednesday, September 06, 2006


ನಾನು, ನನ್ ವಿಷ್ಯ.....

ನನ್ ಹೆಸ್ರು ನಿಶಾಂತ್ ಅಂತ. ನಮ್ಮನೆ ಇರೋದು ಬಾಸ್ಟನ್-ನಲ್ಲಿ. ಮನೇಲಿರೋದು ಅಪ್ಪ, ಅಮ್ಮ, ನಾನು ಮೂರೇ ಜನ. ಉಳಿದಂತೆ ನಮ್ಮ ಮನೆಯವ್ರೆಲ್ಲ ಇರೋದು..ಅಂದ್ರೆ, ತಾತ, ಅಜ್ಜಿ, ಮಾವ, ಅತ್ತೆ, ದೊಡ್ಡಪ್ಪ, ದೊಡ್ಡಮ್ಮ, ಅಣ್ಣ, ಅಕ್ಕ,.....ಎಲ್ರೂ ಇರೋದು ಇಂಡಿಯಾ-ದಲ್ಲಿ. ಇವರಷ್ಟೇ ಅಲ್ಲ, ನಮ್ಮ
ಸ್ನೇಹಿತರು, ಗುರುತಿರುವವ್ರೂ, ಗುರುತಿಲ್ಲದವ್ರು, ಅವ್ರು,ಇವ್ರು ಎಲ್ಲ್ರೂ ನನ್ನ ಫೋಟೋಗಳ್ನ ಆಗಾಗ ನೋಡೋದಕ್ಕೆ ಮತ್ತೆ ನನ್ನ activities ಎಲ್ಲಾ ಅಗಾಗ ಅವ್ರಿಗೆ ತಿಳಿಸೋದಕ್ಕೆ ಅಂತ ಅಮ್ಮ ಈ ಬ್ಲಾಗ್ ಮಾಡಿದಾಳೆ. ನಾನು(!), ಅಮ್ಮ ಇಬ್ರೂ ಅಗಾಗ ಇಲ್ಲಿ ಬಂದು ಅದೂ ಇದೂ ಹರಟ್ತಾ ಇರ್ತೀವಿ. ಈಗ ಸದ್ಯಕ್ಕೆ ಇಷ್ಟು ಸಾಕು. ಯಾ.........ಕಂದ್ರೆ,ನಂಗೆ ನಿದ್ದೆ ಬರ್ತಿದೆ....ಹೋಗ್ಬೇಕು. ನ್ಯಾಪ್ ಟೈಮ್! ಆಮೇಲೆ ಸಿಗ್ತೀನಿ, ಓ.ಕೆ? ಬಾಯ್.......

2 comments:

bhadra said...

ಕಣ್ತುಂಬಾ ನಿದ್ರೆ ಮಾಡು. ಮಧ್ಯೆ ಎದ್ದು ಅಳ್ಬೇಡ. ನೀ ಅತ್ರೆ ಮನೆಯವರ ಶಕ್ತಿಯೇ ಉಡುಗಿ ಹೋಗತ್ತೇ.

ಬಾರೋೆ ಬಾರೋೆ ನನ್ನ ಪುಟ್ಟಣ್ಣ
ನಾಲ್ಕು ಹಲ್ಲು ತೋರು ನೀ ನನ್ನಣ್ಣ
ಮುದ್ದಿನ ರಾಜ ಗಿಡ್ಡು ಪುಟಾಣಿ
ಕೊಡುವೆನು ಬಾರೋ ಗುಂಡು ಬಟಾಣಿ

nishu mane said...

ನಿಮ್ಮ ಕಾಮೆಂಟ್ಸ್ ನೋಡ್ತಾ ಇದ್ರೆ, ಇನ್ನಷ್ಟು ಪೋಸ್ಟಿಂಗ್ಸ್ ಮಾಡೊ ಸ್ಪೂರ್ತಿ ಬರ್ತಿದೆ. ಹುಮ್ಮಸ್ಸು ಕೊಡ್ತಿರೋದಕ್ಕೆ ನಿಮ್ಗೆ ತುಂಬಾ ಥ್ಯಾಂಕ್ಸ್. ನಿಶು ನಂಗೆ ಒಂಚೂರು ಬಿಡುವು ಕೊಟ್ಟ ತಕ್ಷಣ ನೆಕ್ಸ್ಟ್ ಪೋಸ್ಟಿಂಗ್. ಆಗಾಗ ಇಲ್ಲಿ ಬರ್ತಾ ಇರಿ ಮತ್ತು ಬರೀತಾ ಇರಿ.