

ಬರೀ ನಗ್ತಾ ಇರೋ ನಿಶು ಫೋಟೋಗಳ್ನೇ ತೋರಿಸ್ತೀಯ ನಮ್ಗೆ ಅಂತ complaint ಮಾಡೋವ್ರಿಗೆಲ್ಲಾ ತೋರಿಸೋಕ್ಕೆ ಎರಡೇ ಎರಡು ಅಳೋ ಚಿತ್ರಗಳು- ನಿಶೂದು. ಜೊತೆಗೆ ಕನ್ನಡದ ಜಾನಪದ ಕಣಜದಿಂದ ಆಯ್ದ ಮೂರು ಮುತ್ತುಗಳು - ಅಳುವಾಗಲೂ ಮುದ್ದು ಸುರಿಯುವಂತೆ ಮಾಡೊ ಮ್ಯಾಜಿಕ್ ಗೊತ್ತಿರೋ ಎಲ್ಲ ಕಂದಮ್ಮಗಳಿಗೂ........
ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗೆ
ಕುಡಿ ಹುಬ್ಬು ಬೇವೀನ ಎಸಳ್ಹಂಗೆ ಕಣ್ಣೋಟ
ಶಿವನ ಕೈಯಲುಗು ಹೊಳೆದಂಗೆ........
ಅತ್ತಾರೆ ಅಳಲವ್ವ ಈ ಕೂಸು ನಮಗಿರಲಿ
ಕೆಟ್ಟಾರೆ ಕೆಡಲಿ ಮನೆಗೆಲಸ ಹೊರೆಗೆಲಸ
ಮಕ್ಕಳಿರಲವ್ವ ನಿನ್ನಂಥಾ..........
ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೇನು
ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆ
ನೀ ಕೇಳಿದಾಗೆಲ್ಲ ಕೊಡುವೇನೂ...........
ಈ ಹಾಡುಗಳ ಜೊತೆಗೇ ಅಣ್ಣಾವ್ರು ಕಾಮನ ಬಿಲ್ಲು-ನಲ್ಲಿ ಹಾಡಿದ್ದ ಹಾಡಿನ ಎರಡು ಸಾಲು ನೆನೆಪಿಗೆ ಬರ್ತಿದೆ. ಮರೆತು ಹೋಗೋ ಮುಂಚೆ ನಿಮ್ಮ ಜೊತೆ ಹಂಚಿಕೊಂಡು ಬಿಡ್ತೀನಿ.
`ನಕ್ಕಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವು'........
4 comments:
ಮೀರಾ
ಪೋಸ್ಟಿಂಗ್ ಚೆನ್ನಾಗಿದೆ
ನನಗಿನ್ನೊಂದು ಹಾಡು ನೆನಪಿಗೆ ಬಂತು ಪುನೀತ್ ಸಿನಿಮಾದ್ದ್ದು
ಆ ದೇವ ನಮಗಾಗಿ ತಂದಾ ಸಿರಿಯೇ
ಈ ಮನೆಯ ಸೌಭಾಗ್ಯ ನಿನ್ನಾ ನಗೆಯೇ
ಅಳಲೇನು ಚಂದ ನನ್ನ "ಪುಟ್ಟ ದೊರೆ "ಯೇ
ಹಾಯಾಗಿ ಮಲಗೂ ಜಾಣಮರೀಯೇ
ನನ್ನ ಜಾಣಮರಿಯೇ....
ನಿಶು....ಪುಟ್ಟ ದೊರೇ...
ಅಲ್ ಬೇದಪ್ಪಾ... ಅಮ್ಮಂಗೆ ಅತ್ತ ಅತ್ತ ಮಾಡನಾ...
-ಮಾಲಾ ಆಂಟಿ
ಯಾಕಪ್ಪಾ ಮಗೂನ ಅಳಿಸ್ತಿದ್ದಾರೆ? ನಿಷ್ಕರುಣಿಗಳು.
ಬಾರೊ ಪುಟ್ಟ, ಅಳ್ಬೇಡ.
ಅತ್ತಿತ್ತ ನೋಡದಿರು
ಅತ್ತು ಹೊರಳಾಡದಿರು
ನಿದ್ರೆ ಬರುವುದು ಹೊದ್ದು
ಮಲಗು ಮಗುವೇ
ಮಾಲ, ಹಾಡು ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಕಣೆ. ನಿಶು-ಗೆ ಅತ್ತ ಗಿತ್ತ ಮಾಡೋದೆಲ್ಲ ಈಗ್ಲೇ ಹೇಳ್ಕೊಡ್ಬೇಡ ಮತ್ತೆ!
ತವಿಶ್ರೀ ಅವ್ರೆ, ಏನೂ ಯೋಚ್ನೆ ಮಾಡ್ಬೇಡಿ. ಅಳೋ ಮಗೂನ ಸಮಾಧಾನ ಮಾಡಿ ನಗಿಸಿದ್ದಾಗಿದೆ. `ಅತ್ತಿತ್ತ' ಹಾಡಿಗೆ ತುಂಬಾ ಥ್ಯಾಂಕ್ಸ್.
ಮೀರ.
Post a Comment