Saturday, December 08, 2007

ಉಂಡಾಡಿ ಗುಂಡ

ಉಂಡಾಡಿ ಗುಂಡನ ಹಾಡು ಗೊತ್ತಾ ನಿಮ್ಗೆ? ಇನ್ನೂ ಬೇಕು, ಇನ್ನೂ ಬೇಕು ಅಂತ ತಿಂತಾನೇ ಇದ್ರೆ, ಏನಾಗತ್ತೆ ಗೊತ್ತು ತಾನೆ!



ಉಂಡಾಡಿ ಗುಂಡ

ಆಲೂಗೆಡ್ಡೆ ಬೋಂಡ

ಮದ್ವೆ ಮನೇಗ್ ಹೋದ

ಹತ್ತು ಲಾಡು ತಿಂದ

ಹೊಟ್ಟೆ ನೋವು ಎಂದ

ಅಮ್ಮ ಬೆಣ್ಣೆ ಕೊಟ್ಟಳು

ಇನ್ನೂ ಬೇಕು ಅಂದ

ಅಪ್ಪ ದೊಣ್ಣೆ ತಂದನು

ಕೈ ಕಟ್, ಬಾಯ್ ಮುಚ್ಚ್

ಗಪ್ ಚಿಪ್ ಶ್..............

2 comments:

Sheela Nayak said...

ಮೀರಾ,
ಇದು ನನಗ "ಸುಧಾ" ಪತ್ರಿಕೆಯಲ್ಲಿ ಸಿಕ್ಕಿತು. ಓದಿದ ಕೂಡಲೆ ನಿಮ್ಮ ನೆನಪಾಯಿತು. ಇಲ್ಲಿ ಅಂಟಿಸಿದ್ದೇನೆ. ಆಕರ್ಷಕವಾಗಿ ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕುವುದಾದರೆ ಹಾಕಿ.
ಕ, ಕಾ....ಬಳ್ಳಿ
ಕಪ್ಪಿನ ಬಣ್ಣದ ಹಕ್ಕಿಯು ಅಹ!ಹಾ!
ಕಾ ಕಾ ಎನ್ನುತ ಹಾರುತಿದೆ.
ಕಿಟ್ಟನ ಮನೆಯ ಅಂಗಳದಲ್ಲಿಹ
ಕೀಟಗಳನದು ತಿನ್ನುತಿದೆ.
ಕುಲವೇ ಕಲಿತಹ ಹಿರಿಗುಣವೊಂದಿದೆ
ಕೂಟವ ಕಟ್ಟುವ ಓ ಬುದ್ಧಿ.
ಕೆಲಸದಿ ಶ್ರದ್ಧಾ ಭಕ್ತಿಯು ತುಂಬಿದೆ
ಕೇಳಿರಿ ನಿಮಗಿದು ಸದ್ಬುದ್ಧಿ.
ಕೈಗದು ಬಾರದು ದಾಸ್ಯವನೊಪ್ಪದು
ಕೊಟ್ಟೇ ತಿಂಬುದ ಯೋಚಿಸಿರಿ.
ಕೋಗಿಲೆಯಂಥಾ ಮೈ ಬಣ್ಣದ ಅದು
ಕೌ ಎನ್ನಲು ಕಲ್ಲೆಸಯದಿರಿ.
ಕಂಠವು ಕರ್ಕಶವಾದರೂ ಕಾಗೆಯು
ಕಃಫಿಕವಲ್ಲೈ ಹಳೆಯದಿರಿ.
ಎಲ್. ಎಸ್. ಹೆಗಡೆಯವರು ಅವರ ಶಿಕ್ಷಕರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟದ್ದನ್ನು ಸುಧಾ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಾರೆ.
ಶೀಲಾ.

veena said...

enu balyada dinagalu nenapadave??