ಇದು ನಿಶುಮರಿ ತಿನ್ನೋ ಆನೆಮರಿ. ಪ್ಯಾನ್‍ಕೇಕ್ ದೇಹ, ಕ್ಯಾರೆಟ್ ಕಾಲು-ಬಾಲ, ಸಕ್ರೆ ಕಣ್ಣು....ಈ ಆನೆಮರೀಗೆ.
******
ನಿಶು ಒಂದು ವರ್ಷದ ಮಗುವಿದ್ದಾಗ, ಅವನನ್ನು ಸಾಲಿತ್‍ವಿಕ್ ಜ಼ೂಗೆ ಕರ್ಕೊಂಡು ಹೋಗಿದ್ವಿ. ಪ್ರಾಣಿ, ಪಕ್ಷಿಗಳನ್ನ ತುಂಬಾ ತುಂಬಾ ಇಷ್ಟ ಪಡುವ ನಿಶೂ ಅಲ್ಲಿ ಆನೆ ನೋಡಿದ್ದು ಹೀಗೆ........
......ಅಲ್ಲಿಂದ ಮನೆಗೆ ಬಂದ ಮೇಲೆ, `ಆನೆ ಮರಿ ಹ್ಯಾಗಿರತ್ತೆ' ಅಂತ ಕೇಳ್ದಾಗೆಲ್ಲ `ಹೀಗೆ ' ಅಂತ ತೋರಿಸ್ತಿದ್ದ.....
..................ಹೀಗೂ..................
...ಮತ್ತು.....ಹೀಗೂ ಇರತ್ತಂತೆ.
...............ಅಷ್ಟೇ ಅಲ್ಲ, ತನ್ನ ಗೊಂಬೆಗಳನ್ನೆಲ್ಲ ಸಾಲಾಗಿ ಕೌಚ್ ಮೇಲೆ ಕೂರಿಸಿ, ಅವಕ್ಕೆಲ್ಲ ಆನೆಸವಾರಿ ಮಾಡಿಸ್ತಿದ್ದ!
ಆಶ್ಲ್ಯಾಂಡ್ ಲಕ್ಷ್ಮೀ ದೇವಸ್ಥಾನದಲ್ಲೂ ಮೊದಲು ಕಣ್ಣಿಗೆ ಬೀಳ್ತಿದ್ದಿದ್ದು, ಕಂಭದ ಮೇಲೆ, ಗೋಡೆ ಮೇಲೆ ಇದ್ದ ಆನೆಗಳೇ.
ಮೊನ್ನೆ ಮೂರು ತುಂಬಿದಾಗ, ನಿಶು ನ್ಯೂ ಜೆರ್ಸಿಯ ಸಿಕ್ಸ್‌ಫ್ಲಾಗ್ಸ್‌ನಲ್ಲಿರೋ ಅನಿಮಲ್ ಸಫಾರಿಯಲ್ಲಿ ಕಂಡ ಆನೆಗಳು..............
....................ಹೀಗಿದ್ವು.
ಇಲ್ಲೇ ಮನೆ ಹತ್ತಿರ ನಡೀತಿದ್ದ ಕಾರ್ನಿವಲ್ ಒಂದರಲ್ಲಿ, ಅಪ್ಪನ ಜೊತೆ `ಹಾರೋ ಆನೆ' ಗಿರಗಿಟ್ಲೆ ಮೇಲೆ ಕೂತು ನಿಶು ಎಂಜಾಯ್ ಮಾಡಿದ್ದು ಹೀಗೆ...
ನಂಗೆ ಗೊತ್ತಿರೋ ಒಂದಿಷ್ಟು ಆನೆ ಹಾಡುಗಳು ಇಲ್ಲಿವೆ.
ಆನೆ ಹಾಡು - ೧
ಆನೆ ಬಂತೊಂದಾನೆ
ಏರಿ ಹತ್‍ತೊಂದಾನೆ
ದಾರೀಲ್ ನಡೀತೊಂದಾನೆ
ಎಳೆಹುಲ್ ಮೇಯ್ತೊಂದಾನೆ
ತಿಳಿನೀರ್ ಕುಡೀತೊಂದಾನೆ
ಹಿಂಡಲ್ಲಿ ಉಳೀತೊಂದಾನೆ
ಕಂಡಲ್ಲಿ ನಡೀತೊಂದಾನೆ
ಆನೆಗಳೆಲ್ಲ ಸಾಲಿಡುವಾಗ....
ಇದೆಲ್ಲಿ ಬಂತು ಮರಿಯಾನೆ?
ಇದೆಲ್ಲಿ ಬಂತು ಪುಟ್ಟಾನೆ?
(ಕಡೆಯ ಎರಡು ಸಾಲು ಹೇಳುವಾಗ ನಿಮ್ಮ ಮುಂದೆ ಇರೋ ಪುಟ್ಟಾನೆ ಮರಿಯನ್ನು ಹಿಡಿದು ಕಚಗುಳಿ ಕೊಟ್ಟರೆ, ತುಂಬಾ ಚೆನ್ನಾಗಿರತ್ತೆ).
ಆನೆ ಹಾಡು - ೨
ಆನೆ ಬಂತೊಂದಾನೆ
ಯಾವೂರಾನೆ?
ಬಿಜಾಪುರದಾನೆ
ಇಲ್ಲೀಗ್ಯಾಕೆ ಬಂತು?
ದಾರಿ ತಪ್ಪಿ ಬಂತು
ದಾರೀಲೊಂದು ಕಾಸು,
ಬೀದೀಲೊಂದು ಕಾಸು
ಎಲ್ಲಾ ದುಡ್ಡೂ ತಗೊಂಡು
ಶೆಟ್ರಂಗ್‍ಡೀಗ್ ಹೋಗಿ,
ಕೊಬ್ರಿ ಮಿಟಾಯ್ ಕೊಂಡ್‍ಕೊಂಡು,
ಮಕ್ಕಳ್‍ಗೆಲ್ಲ ಕೊಟ್ಟು,
ತಾನೊಂಚೂರ್ ತಿಂದು,
ಆನೆ ಓಡಿ ಹೊರ್ಟ್‌ಹೋಯ್ತು!
(ಈ ಹಾಡು ಹೇಳುವಾಗ, ನೀವೇ ಆನೆ ಆಗಿ ನಿಮ್ಮ ಪುಟಾಣಿಗೆ ಆನೆಸವಾರಿ ಮಾಡಿಸಬೇಕು)
7 comments:
’ಫ’ಗೆ ’pha' ಉಪಯೋಗಿಸಿ. ’f' ಉಪಯೋಗಿಸ್ಬೇಡಿ.
ಆನೆಮರಿ ಹುಷಾರು. ಮತ್ತೆ, ಮೈಸೂರು ಒಡೆಯರು ಬಂದು "ಏನಪ್ಪಾ ನಿಶು, ನಮ್ ದಸರಾ ಜಂಬೂಸವಾರಿಗೆ ನಿನ್ ಆನೆಮರಿನ ಕಳ್ಸಿಕೊಡಪ್ಪ" ಅಂತ ಅಂದ್ಬಿಟ್ರೆ ಏನ್ಮಾಡೋದು? :-)
thanks for reminding bhaagvatre, martu hOgittu.
aaytu, aanemareena huShaaraagi nODkoLteevi.
-meera.
Nishumari haagoo Aanemari 2 chenda ive.
PSP
ಮೀರಾ ಅವರೆ, ನಿಶು ತಿನ್ನೋ ಆನೆಮರಿ ಚೆನ್ನಾಗಿದೆ.. ನಿಮ್ಮ್ ಕ್ರಿಯೆಟಿವಿಟಿಗೆ ಹಾಟ್ಸ್ ಆಫ್!! ನಾವು ಆನೆ ಹಾಡು ಹೇಳ್ತಿದ್ದು ಹೀಗೆ :
ಆನಿ ಬಂತೊಂದು ಆನಿ, ಯಾವೂರು ಆನಿ, ಬಿಜಾಪೂರ ಆನಿ,
ಇಲ್ಲಿಗ್ಯಾಕ ಬಂತು, ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು
ಅದೇ ದುಡ್ಡ ಕೊಟ್ಟು, ಸೇರ ಕೊಬ್ರಿ ತಂದು
ಲಟಲಟ ಮುರದು ಹುಡುಗರ ಕೈಯಾಗ ಕೊಟ್ಟು
ಆನಿ ಓಡೋಡೋಡ ಹೋಯ್ತು!
ಕರಡಿ ಆಯ್ತು, ಆನೆನೂ ತಿಂದಾಯ್ತು. ಮುಂದೆ ಯಾವುದಕ್ಕೆ ಗ್ರಹಚಾರ ಕಾದಿದೆಯಪ್ಪಾ.....!
-ಜಿತೇಂದ್ರ
Hi,
There was a reference to your blog in today's vijaya karanataka, that made me to visit.. Looks interesting..
BTB, I am maintaing a blog on similar topic for a while now - http://baalyada-ata.blogspot.com/
-Guru
ಹಾಯ್ ಮೀರಾ,
ನಿಮ್ಮ ಪುಟ್ಟ ನಿಶುವಿನ ಮನೆ ನಿಜಕ್ಕೂ ತು೦ಬಾನೇ interesting ಆಗಿದೆ. ಮನೆ ನೋಡಿ ಒ೦ಥರಾ ಖುಷಿಯಾಯ್ತು :)
~ಸುಷ್ಮ
Post a Comment