Wednesday, December 16, 2009

Nishu's India, 09 - ೩

ಬಸವನ ಗುಡಿ ಪಾರ್ಕ್ ಸರ್ಕೀಟು :



ಅಮ್ಮಾ...ಹೀಗೆ ತಿರ್‍ಕ್ಕೊಂಡು ಜಾರ್‍ಲಾ?



ನೋ?...ಹೀಗೇ ಬರ್‍ಬೇ್ಕಾ..?



ಓ......ಕೇ.....



ಕ್ಯಾನ್ ಯೂ ಸೀ ಮೀ...ಅಮ್ಮಾ?



ಈಗ್ನೋಡು ಎಲ್ಲಿದೀನಿ....



ತಾತನ ಜೊತೆ ಜೋಕಾಲಿ



ಈ ತಾತನ ಹೆಸ್ರು ಡಿ.ವಿ.ಗುಂಡಪ್ಪ ಅಂತೆ.
ಇವ್ರು ಮಾತ್ರ ಯಾವಾಗ್ಲೂ ಈ ಪಾರ್ಕಲ್ಲೇ ಇರ್ಬೋದಂತೆ!
ನಾನ್ ಮಾತ್ರ ಮನೇಗ್ ಹೋಗ್ಬೇಕಂತೆ......
ನಾಟ್ ಫೇರ್ ಅಮ್ಮಾ.






Tuesday, December 01, 2009

Nishu's India 09 - ೨

ಅಮ್ಮನ ಜೊತೆ ರಂಗೋಲಿ ಹಾಕೋದು ಕಲಿತಿದ್ದು :




ಹೀಗಾ... ಅಮ್ಮ?




ನಂಗೂ ರಂಗೋಲಿ ಪುಡಿ ಕೊಡು.....



ನಾನು ಚಾಕ್‍ಪೀಸ್‍ನಲ್ಲೇ ಬರೀತೀನಿ...




ತುಂಬಾ ಚೆನ್ನಾಗಿದೆ ಅಮ್ಮಾ....ಅಲ್ವಾ ಅಜ್ಜಿ?







Monday, November 30, 2009

ನಮ್ಮ ಮನೆಯಲೊಬ್ಬ ಎಂಟರ್‍ಟೈನರ್ ಇರುವನು......

ಕಳೆದ ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಅಮ್ಮನ ಜೊತೆಗೆ ಇಂಡಿಯಾಗೆ ಹೋಗಿದ್ದ ನಿಶು, ಅಲ್ಲಿ ಮಾಡಿದ ಮೋಜು-ಮಸ್ತಿಗಳ ಚಿತ್ರ ಸರಣಿ ಈಗ ಶುರು.
ಅಜ್ಜಿ-ತಾತನ ಮನೆಯಲ್ಲಿ ಒಂದಿನ ಏನಾಯ್ತು ಗೊತ್ತ?




ಭೂತದ ಮರಿ ಥರಾ ಕಾಣ್ತಿದೀನಾ?



ನಂಗೇನೂ ಕಾಣ್ತಿಲ್ವಲ್ಲಾ....



ಚಡ್ಡಿ ಹೀಗೂ ಹಾಕ್ಕೋಬಹುದಲ್ಲಾ?



ಹ್ಹಿ..ಹ್ಹಿ...ಹಿ...ಹ್ಹಿ...ಹ್ಹಿ.......








Friday, October 02, 2009

ಗಾಂಧಿ ತಾತನ ಹುಟ್ಟು ಹಬ್ಬ



ಈ ದಿನ ಗಾಂಧಿ ತಾತ ಹುಟ್ಟಿದ ದಿನ ಅಂತೆ!



ಕೆಟ್ಟದ್ದನ್ನ ನೋಡದೆ, ಕೇಳದೆ, ಆಡದೆ ಇರೋದೇ ಒಳ್ಳೇದು ಅಂತ ಅವ್ರು ಹೇಳಿದ್ದಂತೆ....



ಮಕ್ಕಳಂದ್ರೆ ಈ ತಾತಂಗೆ ತುಂಬಾ ಇಷ್ಟ ಅಂತೆ...


ಪುಟ್ಟ ಮಗುವಾಗಿದ್ದಾಗ ಅವ್ರು ಅಮ್ಮನ ಜೊತೆ ಹೀಗಿದ್ರಂತೆ!...
ಆಮೇಲೆ ಹೀಗೂ ಇದ್ರಂತೆ!......
ಹ್ಯಾಪಿ ಬರ್ತ್ ಡೇ ಗಾಂಧಿ ತಾತ............


ಗಾಂಧಿ ತಾತ ಹೇಳಿದ್ದು ಮರೀಬೇಡಿ....ಯಾಕಂದ್ರೆ, ಯಾವಾಗ್ಲೂ ಒಳ್ಳೇದಕ್ಕೇ ಒಳ್ಳೇದಾಗೋದಂತೆ.






Tuesday, May 26, 2009

Happy Birthday Nishoooo......




ನಿಶೂಗೆ ಇವತ್ತಿಗೆ ನಾಲ್ಕು ವರ್ಷ! ನಿಶು ಎಷ್ಟು ದೊಡ್ಡವನಾದ್ರೂ ಅವನ ಇವತ್ತಿನ ಮಗುತನ, ಕುತೂಹಲ, ಪ್ರೀತಿ, ಉತ್ಸಾಹ ಎಲ್ಲ ಯಾವತ್ತಿಗೂ ಅವನ ಜೊತೆಗೇ ಇರಲಿ ಅಂತ ಅಪ್ಪ, ಅಮ್ಮನ ಹಾರೈಕೆ, ನಿಮ್ಮ ಹಾರೈಕೆಗಳ ಜೊತೆಗೆ.

ಹುಟ್ಟಿದ ಹಬ್ಬದ ದಿನ ನಿನ್ನ ಬ್ಲಾಗ್‍ನಲ್ಲಿ ಏನು ಹಾಕೋದು ಅಂತ ಅಮ್ಮ ಕೇಳಿದಾಗ, ತನ್ನದೊಂದು ಫೇವರೆಟ್ ಹಾಡು ಹಾಡಿ ಅದರ ವೀಡಿಯೋ ಹಾಕಲು ನಿಶೂನೇ ಹೇಳಿದ್ದು. ನಿಶು ಪ್ರೀತಿಯ ಜಯಂತ್ ಅಂಕಲ್ ಮತ್ತು ರಘು ಬರೆದು, ರಘು ಅಂಕಲ್ ಹಾಡಿರೋ ಈ ಹಾಡು ಈಗ ಇಲ್ಲಿದೆ. (ಅಂದ ಹಾಗೆ ನಾವೆಲ್ಲ ಗಿಟಾರ್‍ಪತಿ ಅಂತಲೇ ಕರೀತಿದ್ದ ನಮ್ಮ ಮೈಸೂರಿನ ಹುಡುಗ, ನನ್ನ ಫ್ರೆಂಡ್ ರಘುಪತಿ ದೀಕ್ಷಿತ್ ಈಗ ಬೆಳೆದಿರೋ ಎತ್ತರ ನೋಡಿದರೆ, ಖುಷಿಯಿಂದ ಮನಸ್ಸು ತುಂಬಿ ಬರುತ್ತದೆ. ಸಧ್ಯದಲ್ಲೇ ರಘು ಮೇಲೆ ಒಂದು ಪೋಸ್ಟ್ ನಿಶೂಮನೆಯಲ್ಲಿ ಹಾಕುವ ಆಸೆ ಇದೆ.)




ಈ ಹಾಡಿನ ಸಾಹಿತ್ಯ :




ಪ್ರೀತಿಯ, ಮನಶಾಂತಿಯ, ಸಿರಿಹೊನ್ನಿನ ನಾಡಿದು

ಹಸಿರು ವನಗಳ, ತಂಪು ನದಿಗಳ ಸುಂದರ ಬೀಡಿದು

ಲೋಕವೇ ಒಂದಾಗುವಾ ಸಂಗಮ, ಭೇದವೇ ಇಲ್ಲದ ಹಿರಿತನ

ನಾಳಿನಾ ಹೊಸ ಆಶಾಕಿರಣ

ನಮ್ಮ ನಾಡು, ಕರುನಾಡು.


ಕಡಲಿನ, ಮಲೆ ಮಡಿಲಿನ, ಬಿಸಿ ಬಯಲಿನಾ ನಾಡಿದು

ಬೆವರ ಹನಿಗಳು, ವಿವಿಧ ದನಿಗಳು ಎಳೆಯುವಾ ತೇರಿದು

ಙ್ಞಾನದ ಪರಿತಾನದ ಹಂಬಲ, ಚಿಗುರಿಗೆ ಬೇರಿನ ಬೆಂಬಲ

ಮಮತೆಯ,ಸಮತೆಯ ಅಂಗಳ

ನಮ್ಮ ನಾಡು, ಕರುನಾಡು.

***


ಅಂದ ಹಾಗೆ, ‘ಸರ್ವಮಂಗಳ’ ಚಿತ್ರದಲ್ಲಿರುವ ಈ ಹುಟ್ಟುಹಬ್ಬದ ಹಾಡು ನೋಡಿದೀರಾ? ಇಲ್ಲ ಅಂದ್ರೆ ಈಗ್ಲೇ ನೋಡಿಬಿಡಿ. ಈ ದಿನ ಹುಟ್ಟಿದ ಹಬ್ಬ ಆಚರಿಸಿಕೊಳ್ತಿರುವ ಎಲ್ಲ ಮಕ್ಕಳಿಗೂ ಈ ಹಾಡು.


Tuesday, April 21, 2009

Little piggy

ಇನ್ನೂ ವರ್ಷವೂ ತುಂಬಿರದಿದ್ದ ನಿಶೂನ ಈ ಪುಟ್ಟ ಪಾದಗಳ ಒಂದೊಂದೇ ಬೆರಳು ಹಿಡಿದು, ‘ದಿಸ್ ಲಿಟಲ್ ಪಿಗ್ಗಿ...’ ಎಂದು ನಾನು ಹಾಡುತ್ತಿದ್ದಾಗ, ದೂರಿಯಾಡುತ್ತಾ ತನ್ನ ಕಾಲ್ಬೆರಳುಗಳನ್ನ ತಾನೂ ಹಿಡಿಯುವ ಆಟ ಆಡುತ್ತಿದ್ದ ಈ ಮಗುವಿಗೆ ಮುಂದಿನ ತಿಂಗಳಿಗೆ ನಾಲ್ಕು ವರ್ಷ ತುಂಬಲಿದೆ. ಈಗಲೂ ನಿಶೂಗೆ ಈ ಹಾಡು ಇಷ್ಟ. ಅಮ್ಮನೋ, ಅಪ್ಪನೋ ತನ್ನ  ಕೈ, ಕಾಲು ಬೆರಳಿನ ಉಗುರು ಕತ್ತರಿಸುವಾಗ ತಾನೇ ಹಾಡುತ್ತಾನೆ. ಅಮ್ಮನ ದೆಸೆಯಿಂದ ಈ ಲಿಟಲ್ ಪಿಗ್ಗಿ ಈಗ ಹಂದಿಮರಿ ಆಗಿರೋದಲ್ಲದೆ, ಇಂಗ್ಲಿಷ್ ರೈಮ್‍ನಲ್ಲಿ ಅತ್ತ ಹಾಗೆ ವೀ ವೀ ಅಂತ ಅಳದೆ, ಕನ್ನಡದಲ್ಲಿ ಆನಂದವಾಗಿ ಅಹ್ಹಹ್ಹಹ್ಹಾ...ಅಂತ ಅಟ್ಟಹಾಸ ಮಾಡ್ತಿದೆ. ನೀವೇ ನೋಡಿ ಬೇಕಿದ್ರೆ....





This little piggy went to market,
This little piggy stayed at home,
This little piggy had some pizza,
This little piggy had none.
And this little piggy went 'Wee wee wee' all the way home...


ಈ ಹಂದಿಮರಿ ಹೋಯ್ತು ಮಾರುಕಟ್ಟೆಗೆ


ಈ ಹಂದಿಮರಿ ಉಳೀತು ಮನೆಯೊಳಗೆ


ಈ ಹಂದಿಮರಿ ತಿಂತು ಕಡ್ಲೆ-ಬೆಲ್ಲ


ಈ ಹಂದಿಮರೀಗ್ ಪಾಪ ಏನೂ ಇಲ್ಲ

ಈ ಹಂದಿಮರಿ ಯಾಕೊ ಸುಮ್‍ಸುಮ್ನೆ ನಗ್ತಾ ಇತ್ತು
 ಅಹ್ಹಹ್ಹಹ್ಹ ಹಹ್ಹಹ್ಹಹ್ಹ ಹಾ!  

***

ವೀಡಿಯೋನೂ ನೋಡ್ತೀರ?


Saturday, February 14, 2009

ಹ್ಯಾಪಿ ವ್ಯಾಲಂಟೈನ್ಸ್ ಡೇ....

ನಿಶು ಸ್ಕೂಲಿನಲ್ಲಿ ಒಂದು ವಾರದಿಂದ ವ್ಯಾಲಂಟೈನ್ಸ್ ಡೇ ದಿನದ ಸಂಭ್ರಮ. ವಾರದ ಕೊನೆಯಲ್ಲಿ ಬರುವ ಈ ಪ್ರೀತಿಯ ದಿನಕ್ಕಾಗಿ ಮಕ್ಕಳು ದಿನಕ್ಕೊಂದು ಬಣ್ಣ ಬಣ್ಣದ ಚಿತ್ರ, ಕ್ರಾಪ್ಗ್ಟ್ಸ್ ಎಲ್ಲ ಮಾಡಿದ್ದರು. ನಿಶು ಮಾಡಿದ್ದ ಕ್ರಾಫ್ಟ್ಗಳಲ್ಲಿ ಕೆಲವು ಇಲ್ಲಿದೆ.



ನಾನು ಸ್ಕೂಲಿಗೆ ಹೋದಾಗ, ನೀನು ನನ್ನ ಮಿಸ್ ಮಾಡ್ತೀಯಲ್ಲ ಅಮ್ಮ...ಅದಕ್ಕೆ ನಿಂಗೆ ಇದು ...





ಇದು ಹಗ್ಸ್ ಅಂಡ್ ಕಿಸ್ಸೆಸ್ ಅಮ್ಮಾ.....




ಇದು ನನ್ನ ವ್ಯಾಲಂಟೈನ್ಸ್ ಡೇ ಬೆಕ್ಕಿನ ಮರಿ...



....ಮತ್ತೆ ಇದು....ನಿಂಗೆ, ಅಪ್ಪಂಗೆ, ಎಲ್ರಿಗೂ...ಐ ಲವ್ ಯೂ.......
*********



ಅಮೆರಿಕದಲ್ಲಿ ವ್ಯಾಲಂಟೈನ್ಸ್ ಡೇ ಕೇವಲ ‘ಪ್ರೇಮಿಗಳ ದಿನ’ ಅಲ್ಲ, ‘ಪ್ರೀತಿಯ ದಿನ’. ಪುಟ್ಟ ಮಕ್ಕಳು, ದೊಡ್ಡವರು ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ‘ಐ ಲವ್ ಯು’ ಹೇಳುತ್ತಾ ಆಚರಿಸುವ ದಿನ. ಮಕ್ಕಳಿಗೆ ನಾವು ಕೊಡಬಹುದಾದ, ಅವರ ಬದುಕಿನುದ್ದಕ್ಕೂ ಉಳಿಯುವ, ಕಾಪಾಡುವ ಕೆಲವೇ ಉಡುಗೊರೆಗಳಲ್ಲಿ ಪ್ರೀತಿಯೂ ಒಂದು ಎನ್ನುವುದು ನನ್ನ ನಂಬಿಕೆ. ಈ ಬಗ್ಗೆ ಇವತ್ತಿನ ಕೆಂಡಸಂಪಿಗೆಯಲ್ಲಿ ನಾನು ಬರೆದ ಬರಹ ಇಲ್ಲಿದೆ. ನಿಮ್ಮೆಲ್ಲರಿಗೂ ‘ಹ್ಯಾಪಿ ವ್ಯಾಲಂಟೈನ್ಸ್ ಡೇ’.
೧೦ ತಿಂಗಳ ನಿಶು ತನ್ನ ಗೊಂಬೆಗಳ ಮೇಲೆ, ಅಪ್ಪ-ಅಮ್ಮನ ಮೇಲೆ ಪ್ರೀತಿಯ ಧಾರೆ ಹರಿಸುತ್ತಾ, ಸಂಭ್ರಮಿಸುತ್ತಾ ಇದ್ದ ದಿನಗಳಲ್ಲಿ ತೆಗೆದ ಒಂದು ವೀಡಿಯೋ ತುಣುಕು ಇಲ್ಲಿದೆ....ನಿಮಗಾಗಿ.



Saturday, January 10, 2009

Pumpkin patch visit - Oct 08

ಕಳೆದ ಅಕ್ಟೊಬರ್‍ನಲ್ಲಿ ಒಂದು ದಿನ ಸ್ಕೂಲ್‍ಬಸ್ ಹತ್ತಿ, ನಿಶು ಮತ್ತವನ ಒಂದಷ್ಟು ಸ್ನೇಹಿತರು ಕುಂಬಳಕಾಯಿ ತರಲಿಕ್ಕೆ ಅಂತ ಇಲ್ಲೊಂದು ಫಾರ್ಮ್‍ಗೆ ಹೋಗಿದ್ರು. ಅಲ್ಲಿ ಕುಂಬಳಕಾಯಿಯ ಜೊತೆಗೇ ಬೇರೆ ಬೇರೆ ತರಕಾರಿಗಳೂ ಇದ್ವು. ಹತ್ತಿರ ಹೋಗಿ ಮುಟ್ಟಬಹುದಾದ ಪುಟಾಣಿ ಮರಿಗಳಿರುವ pet zoo ಇತ್ತು. ಟ್ರಾಕ್ಟರ್ ಹತ್ತಿ, ಹುಲ್ಲಿನ ಪಿಂಡಿಗಳ ಮೇಲೆ ಕುಳಿತು ಫಾರ್ಮ್ ಪೂರಾ ಸುತ್ತಿ ಸುಸ್ತಾಗಿ, ಮನೆಯಿಂದ ತಂದ ಬುತ್ತಿ ತಿಂದು ಇವರೆಲ್ಲ ಮತ್ತೆ ಬಸ್ ಹತ್ತಿ ಕುಳಿತು, ತಮ್ಮ ತಮ್ಮ ಅಮ್ಮನನ್ನೋ ಅಪ್ಪನನ್ನೋ ಒರಗಿಕೊಂಡು ತೂಕಡಿಸುತ್ತಾ ಮನೆಗೆ ಬಂದು ಸೇರಿದ್ದಾಯ್ತು. ಆಮೇಲೆ ನಿಶು ಮನೇಲಿ ಮೂರ್ನಾಲ್ಕು ದಿನ ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಮಜ್ಜಿಗೆಹುಳಿ, ಕುಂಬಳಕಾಯಿ ಪೈ....ಅಯ್ಯೋ ಹೋಗ್ಲಿ ಸಾಕು ಬಿಡಿ....ಈಗ ಫೋಟೋ ನೋಡ್ಬಿಡಿ.





ಕೋಳಿಮರಿ, ಕೋಳಿಮರಿ...ಕಾಳು ಬೇಕೇ?





ಕಾಳು ಬೇಕು, ಕೂಳು ಬೇಕು...ಎಲ್ಲ ಬೇಕು







ಕುರೀಮರೀಗೂನು ಈಗ ಹಸಿವು ಆಗಿದೆ




ಮೇಕೆಮರಿಯೂ ಬಾಯಿ ಹಾಕಿ ಹುಲ್ಲು ತಿಂತಿದೆ


************




ಹಲೋ...ನನ್ಹೆಸ್ರು ಕುಂಬಳ ಅಂತ. ಬನ್ನಿ ಬನ್ನಿ .............



ಟ್ರಾಕ್ಟರ್ ಸವಾರೀಗೆ ರೆಡೀನಾ?





ಟ್ರಾಕ್ಟರ್ ಸವಾರಿ ಏನ್ ಗಮ್ಮತ್ತಪ್ಪಾ....ಮಜಾ ಅಂದ್ರೆ ಮಜಾ.........



ಅಮ್ಮಾ ಅಮ್ಮಾ....ಅದೇನು?





ಇದಕ್ಕೆ ಕಾಲಿಫ್ಲವರ್ ಅಂತ ಯಾಕಂತಾರೆ?





ಪಂಪ್‍ಕಿನ್ ಪ್ಯಾಚ್ ಬಂತು!................




ಹೀಗೆ ಬಗ್ಗಿ, ಎರಡೂ ಕೈಯಲ್ಲಿ ಹಿಡಿದು....




ಕುಂಬಳಕಾಯಿ ಎತ್ಕೋಬೇಕು.




ಆಮೇಲೆ, ಹೀಗೆ ನಿಧಾನಕ್ಕೆ ಎತ್ಕೊಂಡು ಹೋಗಿ....






ಅಮ್ಮಂಗೆ ಕೊಡ್ಬೇಕು.


ಬಾಯ್ ಬಾಯ್ ಪಂಪ್ಕಿನ್ ಪ್ಯಾಚ್.....


ಅಮ್ಮಾ, ಕುಂಬಳಕಾಯಿ ಇಲ್ಲೇ ಇಟ್ಟು ಮಾರೋಣ್ವಾ?





ನೋಡು ಎಷ್ಟು ಜನ ಗಿರಾಕಿಗಳಿದಾರೆ ಇಲ್ಲಿ!