ನಿಶೂಗೆ ಇವತ್ತಿಗೆ ನಾಲ್ಕು ವರ್ಷ! ನಿಶು ಎಷ್ಟು ದೊಡ್ಡವನಾದ್ರೂ ಅವನ ಇವತ್ತಿನ ಮಗುತನ, ಕುತೂಹಲ, ಪ್ರೀತಿ, ಉತ್ಸಾಹ ಎಲ್ಲ ಯಾವತ್ತಿಗೂ ಅವನ ಜೊತೆಗೇ ಇರಲಿ ಅಂತ ಅಪ್ಪ, ಅಮ್ಮನ ಹಾರೈಕೆ, ನಿಮ್ಮ ಹಾರೈಕೆಗಳ ಜೊತೆಗೆ.
ಹುಟ್ಟಿದ ಹಬ್ಬದ ದಿನ ನಿನ್ನ ಬ್ಲಾಗ್‍ನಲ್ಲಿ ಏನು ಹಾಕೋದು ಅಂತ ಅಮ್ಮ ಕೇಳಿದಾಗ, ತನ್ನದೊಂದು ಫೇವರೆಟ್ ಹಾಡು ಹಾಡಿ ಅದರ ವೀಡಿಯೋ ಹಾಕಲು ನಿಶೂನೇ ಹೇಳಿದ್ದು. ನಿಶು ಪ್ರೀತಿಯ ಜಯಂತ್ ಅಂಕಲ್ ಮತ್ತು ರಘು ಬರೆದು, ರಘು ಅಂಕಲ್ ಹಾಡಿರೋ ಈ ಹಾಡು ಈಗ ಇಲ್ಲಿದೆ. (ಅಂದ ಹಾಗೆ ನಾವೆಲ್ಲ ಗಿಟಾರ್‍ಪತಿ ಅಂತಲೇ ಕರೀತಿದ್ದ ನಮ್ಮ ಮೈಸೂರಿನ ಹುಡುಗ, ನನ್ನ ಫ್ರೆಂಡ್ ರಘುಪತಿ ದೀಕ್ಷಿತ್ ಈಗ ಬೆಳೆದಿರೋ ಎತ್ತರ ನೋಡಿದರೆ, ಖುಷಿಯಿಂದ ಮನಸ್ಸು ತುಂಬಿ ಬರುತ್ತದೆ. ಸಧ್ಯದಲ್ಲೇ ರಘು ಮೇಲೆ ಒಂದು ಪೋಸ್ಟ್ ನಿಶೂಮನೆಯಲ್ಲಿ ಹಾಕುವ ಆಸೆ ಇದೆ.)
ಈ ಹಾಡಿನ ಸಾಹಿತ್ಯ :
ಪ್ರೀತಿಯ, ಮನಶಾಂತಿಯ, ಸಿರಿಹೊನ್ನಿನ ನಾಡಿದು
ಹಸಿರು ವನಗಳ, ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವಾ ಸಂಗಮ, ಭೇದವೇ ಇಲ್ಲದ ಹಿರಿತನ
ನಾಳಿನಾ ಹೊಸ ಆಶಾಕಿರಣ
ನಮ್ಮ ನಾಡು, ಕರುನಾಡು.
ಕಡಲಿನ, ಮಲೆ ಮಡಿಲಿನ, ಬಿಸಿ ಬಯಲಿನಾ ನಾಡಿದು
ಬೆವರ ಹನಿಗಳು, ವಿವಿಧ ದನಿಗಳು ಎಳೆಯುವಾ ತೇರಿದು
ಙ್ಞಾನದ ಪರಿತಾನದ ಹಂಬಲ, ಚಿಗುರಿಗೆ ಬೇರಿನ ಬೆಂಬಲ
ಮಮತೆಯ,ಸಮತೆಯ ಅಂಗಳ
ನಮ್ಮ ನಾಡು, ಕರುನಾಡು.
***
ಅಂದ ಹಾಗೆ, ‘ಸರ್ವಮಂಗಳ’ ಚಿತ್ರದಲ್ಲಿರುವ ಈ ಹುಟ್ಟುಹಬ್ಬದ ಹಾಡು ನೋಡಿದೀರಾ? ಇಲ್ಲ ಅಂದ್ರೆ ಈಗ್ಲೇ ನೋಡಿಬಿಡಿ. ಈ ದಿನ ಹುಟ್ಟಿದ ಹಬ್ಬ ಆಚರಿಸಿಕೊಳ್ತಿರುವ ಎಲ್ಲ ಮಕ್ಕಳಿಗೂ ಈ ಹಾಡು.
15 comments:
ಯಾಪೀ ಬಡ್ಡೇ ಪಾಪಚ್ಚೀ...
ಹ್ಯಾಪಿ ಬರ್ತ್-ಡೇ ನಿಶೂ! :-)
ಹುಟ್ಟ ಹಬ್ಬದ ಶುಭಾಷಯ ಮರಿ...
ಹ್ಯಾಪಿ ಬರ್ತ್ ಡೇ ನಿಶೂ!! ಸದಾ ಹೀಗೇ ನಗ್ ನಗ್ತಾಯಿರು ಮರಿ:)
nishu,
happy birthday...
-Ammu
Many many happy returns of the day Nishu :)
ಹುಟ್ಟು ಹಬ್ಬದ ಶುಭಾಶಯ ಪುಟ್ಟಾ.........
ಒಳ್ಳೇದಾಗಲಿ ಕಣೋ........
ನಿಶು,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕಣೋ...
ಕೆಂಡಸಂಪಿಗೆಯಲ್ಲಿ (http://www.kendasampige.com/article.php?id=1774
) ನಿನ್ನ ಬ್ಲಾಗಿನ ಲಿಂಕ್ ಸಿಕ್ತು.
ಇಲ್ಲಿಗೆ ಬಂದಾಗ ನಿನ್ನ ಮುದ್ದಾದ ದ್ವನಿಯಲ್ಲಿ ಹಾಡು ಕೇಳಿ ನಿನ್ನ ಅಭಿಮಾನಿಯಾಗಿದ್ದೇನೆ.
happy birthday putta...
happy birthday putta...
ನಿಶು ಮರಿಗೆ ಹುಟ್ಟು ಹಬ್ಬದ ಶುಭಾಶಯಗಳು ತುಂಬಾ ತಡವಾಗಿ. "ಸೋಮಾರಿ ಆಂಟಿ" ಅಂತ ಬೈಬೇಡ ಪುಟ್ಟಾ........!! :)
ತುಂಬಾ ತುಂಬಾ ತಡವಾಗಿ,,,,, ಹುಟ್ಟು ಹಬ್ಬದ ಶುಭಾಶಯಗಳು. ತುಂಬಾ ಚೆನ್ನಾಗಿ ಹಾಡಿದ್ದೀಯ.ಖುಷಿಯಾಯ್ತು ಕೇಳಿ.
ಭಾರ್ಗವಿ.
Nishu,
tumbha muddagi hadtiya kano
Namma Naaduuu...
Nice blog .. belated wishes to Nishu :)
ನಿಶು ಪುಟ್ಟ ಬಹಳ ತಡವಾಗಿ ಬರ್ತಿದ್ದೀನಿ
ನಿನ್ನ ಮೇಲೆ ಆ ಸರ್ವಶಕ್ತನ ಕರುಣೆ ಸದಾಕಾಲವಿರಲಿ
ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ||
ಸದಾಕಾಲ ಸಂತೋಷದಿಂದಿದ್ದು, ಸುತ್ತಮುತ್ತಲಿನವರೆಲ್ಲರನ್ನೂ ಸಂತೋಷಿಸುತ್ತಿರು ಎಂದು ಹಾರೈಸುವೆ
ಗುರುದೇವ ದಯಾ ಕರೊ ದೀನ ಜನೆ
Post a Comment