Monday, January 28, 2008

ನಮ್ಮನೆ ಪುಟ್ಟಣ್ಣ

ನಿಶುಮರಿ


ಅಮ್ಮ ಅಂದ್ರೆ ತುಂಬಾ ಇಷ್ಟ


ಅಮ್ಮನ ಕೆನ್ನೇಗ್ ಮುತ್ತು


ಕೊಟ್ಟು, ಕೂಡ್ಲೇ ಕೇಳುತ್ತಾನೆ,


'ಕೊಡ್ತೀಯಾ ಬಿಸ್ಕತ್ತು?'



ಅಪ್ಪನ ಕಂಡ್ರೂ ತುಂಬಾ ಪ್ರೀತಿ


ಅಪ್ಪಾನೇ ಬೆಸ್ಟ್ ಫ್ರೆಂಡು,


ಮನೆಯೊಳಗೇನೇ ಆಡ್ತಿರ್ತಾರೆ

ಇಬ್ರೂನೂ ಕಾಲ್ಚೆಂಡು!




ನನ್ನ ಚಿನ್ನ ನನ್ನ ರನ್ನ
ದಿನವೂ ಒಂದೊಂದ್ ಬಣ್ಣ
ಹಚ್ಕೊಂಡ್ ಬರ್ತಾನ್ ಅಂಗೀಗೆಲ್ಲಾ
ಡೇಕೇರಿಂದ ಚಿಣ್ಣ.


ಬೇಕೇಬೇಕು ಕೇಳಿದ್ದೆಲ್ಲಾ
ಕೊಡ್ದೆ ಇದ್ರೆ ಟೂ..ಟೂ ..
ಹುಬ್ಬು ಕೊಂಕಿಸಿ, ಕೆನ್ನೆ ಉಬ್ಬಿಸಿ
ಮೂಲೇಲ್ ನಿಲ್ತಾನ್ ಛೋಟೂ.



ಯಾಕೆ?, ಏನು?, ಹ್ಯಾಗೆ?, ಎಲ್ಲಿ?
ಎಷ್ಟೊಂದಿದೆ ಪ್ರಶ್ನೆಗಳು!
ತ್ರ ಹೇಳೀ ಹೇಳೀ
ನಂತಲೆಯಾಯ್ತು ಸಾವಿರ ಹೋಳುಗಳು.



7 comments:

Unknown said...

ಪದ್ಯ ಚೆನ್ನಾಗಿದೆ, ನಿಶುನ ತರಾನೇ.

Anonymous said...

ಪದ್ಯವೂ ಚೆನ್ನಾಗಿದೆ, ನಿಶೂ ಚೆನ್ನಾಗಿದ್ದಾರೆ....ನೀವು ಭಾವಚಿತ್ರ ಹಾಕಿರುವ ವಿನ್ಯಾಸವೂ ಅಷ್ಟೇ ಆಹ್ಲಾದಕರವಾಗಿದೆ.

ನನಗೆ ಇಲ್ಲಿ ಮುಖ್ಯವಾಗುವುದು ಎಲ್ಲೆಡೆ ಇಂಗ್ಲೀಷ್ ವ್ಯಾಪಿಸಿರುವ ಈ ಜಗತ್ತಿನಲ್ಲಿ ಕನ್ನಡವನ್ನು ಮಗುವಿನ ಹತ್ತಿರ ತರುತ್ತಿರುವ ನಿಮ್ಮ ಪ್ರಯತ್ನ. ಮಗುವಿಗೂ ಕನ್ನಡವನ್ನು ಮರೆಯದೆ ಕಲಿಸಿದರೆ ಕನ್ನಡ ಭಾಷೆ ಶಾಶ್ವತವಾಗಿ ಉಳಿಯುತ್ತದೆ.

ಏನೇ ಆಗಲಿ ನಿಮ್ಮ ಈ ಪ್ರಯತ್ನಕ್ಕೆ ನನ್ನ ಧನ್ಯವಾದಗಳು

ಗಿರೀಶ ಕೆ.ಎಸ್.
girikavya@gmail.com

Anonymous said...

ಮೀರಾ, ನಾನು ನನ್ನ ೨೧ ತಿಂಗಳ ಮಗನಿಗೇ "YouTube" ನಲ್ಲಿ ಕನ್ನಡ vidieos ಹುಡುಕುವಾಗ ಸಿಕ್ಕಿದ್ದು ನಿಮ್ಮ 'ನಿಶುಮನೇ'.Was very happy to see it, especially Kannada mommy blog. Would def keep visiting your "nishumane". (Sorry , my kannada editor was not working properly, so had to type in english).

-Rekha

nishu mane said...

Thank you Madhu. nammange heege bartaa iri.

Meera.

nishu mane said...

ಅನಾನಿಮಸ್‍ರಿಗೆ ಧನ್ಯವಾದ. ಈ ಪೋಸ್ಟಿಂಗ್ ಮಾಡುವಾಗ ಏನೇನು ಮಾಡಿದರೂ ನಾನು ಅಂದುಕೊಂಡ ಹಾಗೆ ವಿನ್ಯಾಸ ಮಾಡಲಾಗಲಿಲ್ಲ. ಈಗ ನಿಮಗಿದು ಮೆಚ್ಚಿಗೆಯಾಗಿದ್ದು ತಿಳಿದು ಸಂತೋಷ ಆಗ್ತಿದೆ. ತಿಳಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಬರ್ತಾ ಇರಿ.

ರೇಖ,
ನನ್ನ ಬ್ಲಾಗ್ ನಿಮಗೆ ಇಷ್ಟ ಆಗಿದ್ದು ತುಂಬಾ ಸಂತೋಷ. ನಿಮ್ಮ ಮಗೂನೂ ಕರ್ಕೊಂಡು ಆಗಾಗ ಇಲ್ಲಿ ಬರ್ತಾ ಇರಿ. ಬೇಗ ಬೇಗ ಹೊಸ ಪೋಸ್ಟ್‍ಗಳನ್ನ ಹಾಕೋಕೆ ಪ್ರಯತ್ನಿಸ್ತೀನಿ.

ಮೀರ.

Anonymous said...

Hi Meera,

I don't know how to type in Kannada. So I am typing in English. Meera you have a beatiful and melodious voice. I like your voice very much. When I was watching youtube videos I got your video and was keep watching it for 3-4 times. Especially that kaage haadu. I am waiting for your next video with your sweet voice.

nishu mane said...

Hi Shobha, thanks for your comment. keep visiting.

-Meera