Thursday, February 28, 2008

ಗೇರ್ ಗೇರ್ ಮಂಗಣ್ಣ.....

ಗೇರ್ ಗೇರ್ ಮಂಗಣ್ಣ,

ಕಡ್ಲೆಕಾಯ್ ತಿನ್ನಣ್ಣ,

ಬಾಳೆಹಣ್ಣು ನುಂಗಣ್ಣ,

ಅಲ್ಲಿಂದಿಲ್ಲಿಗೆ ಹಾರಣ್ಣ,

ಲಂಕಾಪಟ್ಣ ಸೇರಣ್ಣ,

ಸೀತೆಯನ್ನು ಹುಡುಕಣ್ಣ,

ಭೇಷ್ ಭೇಷ್ ಮಂಗಣ್ಣ!


ಶಿಶುವಿಹಾರದಲ್ಲಿದ್ದಾಗ ನೀವೂ ಈ ಹಾಡು ಕಲಿತಿದ್ರ?


ಕ್ಯೂರಿಯಸ್ ಜಾರ್ಜ್ ಜೊತೆ ನೀವೂ ಮಂಗಾಟ ಆಡ್ಬೇಕಂದ್ರೆ ಇಲ್ಲಿ ಹೋಗ್ಬೋದು.

12 comments:

mynanhipari said...

Nimma NishuMane blog bahala chennagide. Nishu kooda bahala muddagi haadu heliddane...

Anonymous said...

Hi nishu,u r so cute..touch wood:)
I think i came across this blog very late. But still i went through the whole two years of nishu's past sweet memory.
Would like to visit again and again to hear putani nishu's rhymes.(Sorry dont know how to use kannada scripts.so writing in english.)..Matte baruve..
-Chaitanya anna

Anonymous said...

hey nishu ninnaa koti haadu cenaagide
mala aunty

Sridhar Raju said...

ನಮಸ್ತೇ ಮೀರಾ ಅವರೇ ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ

nishu mane said...

Nanhi pariಯ ಅಮ್ಮ ಮತ್ತು ಚೈತನ್ಯ ಅಣ್ಣ ಇಬ್ಬರಿಗೂ ನಿಶುಮನೆಗೆ ಬಂದಿದ್ದಕ್ಕೆ ಮತ್ತು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್....ಹೀಗೇ ಆಗಾಗ ಬರ್ತಾ ಇರಿ.

ಮಾಲಾ, ಥ್ಯಾಂಕ್ಸ್ ಕಣೇ....ಅಮ್ಮೂಗೂ ಹಾಡು ತೋರಿಸ್ದೆ ತಾನೆ?

ಮೀರ.

nishu mane said...

ನಮಸ್ಕಾರ ಶ್ರೀಧರ್. ನಿಮ್ಮ ಆಹ್ವಾನಕ್ಕೆ ತುಂಬಾ ಧನ್ಯವಾದಗಳು. ನನಗೆ ಈ ಕಾರ್ಯಕ್ರಮಕ್ಕೆ ಬರಲು ಈಗ ಸಾಧ್ಯವಾಗುತ್ತಿಲ್ಲವಾದರೂ, ನಿಶುಮನೆಗೆ ಬರುವ ಬ್ಲಾಗಿಗರು ನಿಮ್ಮ ಆಹ್ವಾನ ನೋಡಿ ಕಾರ್ರ್ಯಕ್ರಮದಲ್ಲಿ ಭಾಗಿಗಳಾಗಲಿ ಎಂದು ನಿಮ್ಮ ಆಹ್ವಾನ ಪತ್ರಿಕೆಯನ್ನು ಇಲ್ಲಿ ಹಾಕಿದ್ದೀನಿ. ನಿಮ್ಮ ಕಾರ್ಯಕ್ರಮ ಚೆನ್ನಾಗಿ ನಡೆದು, ಕನ್ನಡ ಬ್ಲಾಗ್ ಪ್ರಪಂಚ ಇನ್ನಷ್ಟು ಬೆಳೆಯಲಿ ಎಂದು ಹಾರೈಸುತ್ತಾ....

ಮೀರ.

bhadra said...

ಓಹ್ ನಿಶು ಇಷ್ಟು ದೊಡ್ಡವನಾದನಾ?

ಇನ್ಮೇಲೆ ಶಾಲೆಗೆ ಹೋಗ್ಬೇಕಾ? ಮೊನ್ನೆ ಇನ್ನೂ ಹುಟ್ಟಿದ ಪಾಪುವಿಗೆ ೨+ ವರ್ಷ ಅಂತ ಸುಳ್ಳು ಹೇಳ್ತೀರಾ :P

ಪಾಪುವಿಗೆ ನನ್ನ ಕಡೆಯಿಂದೊಂದು ಪುಟ್ಟ ಉಡುಗೊರೆ

ಕೈ ಕೆಲಸದಿಂದ ಬಿಡುವೇ ಸಿಗದ ಅಮ್ಮ
ತುಂಟನ ಹಿಡಿಯಲು ಅವಳೇ ಸರಿಯಮ್ಮ
ಕೈಗೆ ಸಿಗದ ಹಾಗೆ ಓಡುವನಲ್ಲಮ್ಮ
ಸಿಕ್ಕ ಕೂಡಲೇ ಜಂಟೀ ಹಲ್ಲುಗಳ ತೋರುವನಮ್ಮ

ಅತ್ತಿಂದಿತ್ತ ಓಡುತಿಹ ತುಂಟ ಪೋರ
ಒಬ್ಬಳೇ ಸಾಕು ಇಂತಹ ತಂಟೆಕೋರ
ಮುದ್ದು ಮೊಗವ ತೋರುವ ಮೋಡಿಗಾರ
ದಿಟ್ಟಿಸಿ ನೋಡದಿರು ಚಿತ್ತ ಚೋರ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

nishu mane said...

ಶ್ರೀನಿವಾಸರೆ, ತುಂಬಾ ದಿನಗಳ ಮೇಲೆ ನಮ್ಮ ಮನೆಗೆ ಬಂದ ನಿಮ್ಮನ್ನ ನೋಡಿ, ತುಂಬಾ ಸಂತೋಷ ಆಗ್ತಿದೆ. ನಿಶು ಮನೇಲಿ ನಾವೆಲ್ಲ ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೆವು.

ಹೌದು, ಮೊನ್ನೆ ತಾನೆ ಹುಟ್ಟಿದ ಈ ಪಾಪೂಗೆ ಇನ್ನೇನು ಮೂರು ವರ್ಷ ತುಂಬಿಬಿಡತ್ತೆ! ಕಾಲ ಓಡತ್ತೆ ಅನ್ನೋದು ಬರೀ ಸುಳ್ಳು....ಅದು ಏರೋಪ್ಲೇನ್ ತರ ಹಾರತ್ತೆ.
ನಿಮ್ಮ ಉಡುಗೊರೆಗೆ ತುಂಬಾ ಥ್ಯಾಂಕ್ಸ್. ಹೀಗೇ ಬರ್ತಾ ಇರಿ.

ಮೀರ.

jomon varghese said...

ನಮಸ್ಕಾರ ಮೀರಾ ಅವರೆ,

ನಿಶು ಮನೆ ಸೊಗಸಾಗಿದೆ. ಪುಟ್ಟನ ಚಿತ್ರವೂ.

ಶಿಶುವಿಹಾರದಲ್ಲಿ ಈ ಹಾಡು ಕೇಳಿದ್ದಷ್ಟೇ ಅಲ್ಲ,ಥೇಟ್ ಮಂಗ್ಯಾನಂತೆ ಆಡ್ತಿದ್ದದ್ದೂ ಉಂಟು.ನಮ್ಮೂರ ಅಂಗನವಾಡಿ ಟೀಚರ್ ನನ್ನನ್ನು ನೋಡುವಾಗೊಮ್ಮೆ ಬಾಲ್ಯದ ತುಂಟತನವನ್ನೆಲ್ಲಾ ನೆನಸಿಕೊಂಡು ಈಗಲೂ ನಗುತ್ತಿರುತ್ತಾರೆ.

ನೀವೂ ಬ್ಲಾಗಿನಲ್ಲಿ ಹೈಪರ್ ಲಿಂಕ್ ಕೊಟ್ಟು ಮಂಗನಾಟ ಆಡಲೂ ಅವಕಾಶವೂ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್.

ಧನ್ಯವಾದಗಳು.

ಜೋಮನ್.

Jagali bhaagavata said...

Update ಮಾಡಿ, ಪ್ಲೀಸ್ :-)

Anonymous said...

Hi Meeraravare , nimma nishu haagu nishumane eredu muddagige, nanage nimma blog style thumbaane ishta , naanu update ge kaytha iruve,
ps

nishu mane said...

ಜೋಮನ್, ನೀವು ನಮ್ಮ ಮನೆಗೆ ಬಂದು, ಮೆಚ್ಚಿಕೊಂಡು ಕಾಮೆಂಟಿಸಿದ್ದಕ್ಕೆ ತುಂಬಾ ಸಂತೋಷ ಆಗ್ತಿದೆ. ಹೀಗೇ ಬರ್ತಿರಿ.

ಭಾಗವತರೆ, ಅನಾನಿಮಸ್-ರೆ, ಥ್ಯಾಂಕ್ಯೂ.