Tuesday, April 15, 2008

ಸೃಷ್ಟಿಗೆ



ಬದುಕಿನ ಬಯಕೆಯ ಸೃಷ್ಟಿಗೆ

ನೀಲಿ ಆಕಾಶದಲ್ಲೊಂದು
ಗಾಳಿಪಟ
ಏರುವ ಎತ್ತರ
ಬೀಸುವ ಗಾಳಿಯ ಅಧೀನ,
ಕೆಳಗೆ ಯಾರದೋ ಕೈ
ದಾರ ತೂರುವ,
ಕೆಳಗಿಳಿಸುವ
ಹುನ್ನಾರ.
ಗಿರಕಿ ಹೊಡೆದು, ನುಲಿದು
ಬಾಲಂಗೋಚಿಯ ಜೊತೆಗೆ
ಕುಣಿದು ಕುಪ್ಪಳಿಸಿ ಆಡುವ
ಸೊಗಸಿನಾಟ ಮಾತ್ರ
ಈ ಗಾಳಿಪಟಕ್ಕೇ ಮೀಸಲು.
ಮಗೂ,
ಹಾರುವ, ನಲಿಯುವ ನಿನ್ನ
ಹಂಬಲಕ್ಕೆ,
ಬಯಕೆಯ ಬಣ್ಣದ
ಬಾಲಂಗೋಚಿಗೆ
ಗಾಳಿಯ ನೆರವೊಂದಿರಲಿ
ಸದಾ.
ನೀ ಏರಿದಷ್ಟೂ ಎತ್ತರ
ನಾ ತೂರಿ ಬಿಡುವೆ ದಾರ.
ಥೇಟ್ ಖಲೀಲ್ ಗಿಬ್ರಾನ್‍ನಂತೇ
ಹೇಳುವೆ -
`ಬದುಕಿನ ಬದುಕುವ ಬಯಕೆಯ
ಸೃಷ್ಟಿ ನೀನು
ನನ್ನಿಂದ ಬಂದರೂ ಬರೀ
ನನ್ನದೇನಲ್ಲ ನೀನು.'

ಹಾರು ಮಗೂ ಹಾರು,
ಕೊನೆ ಮೊದಲಿಲ್ಲದ ಆಕಾಶ
ನಿನ್ನ ಅಂಗಳ.
ಮರಳಿ ನೀ ಬಳಿಗೆ ಬಂದಾಗೆಲ್ಲ
ಕೇಳುತ್ತೇನೆ,
`ಏನೆಲ್ಲ ಕಂಡೆ ಕಂದ
ಅಷ್ಟು ಎತ್ತರದಿಂದ?'
ಏನೇನೆಲ್ಲ ನೀ ನುಡಿವ
ಪರಿಗೆ
ನಾನು ಬೆರಗಾಗುವಷ್ಟು
ದಿನ
ಬದುಕಿನ ಬದುಕುವ ಬಯಕೆ
ಜೀವಂತ.




(ಅಮ್ಮನ ಜೊತೆಗೆ ಗಾಳಿಪಟ ಹಾರಿಸುತ್ತಿರೋ ನಿಶು...........ಮೇಲೆ ಹಾರ್ತಿರೋದು ನಮ್ಮ ಗಾಳಿಪಟಾನೆ..)


ಮೂರು ವರ್ಷಗಳ ಹಿಂದೆ ಸರಿ ಸುಮಾರು ಇದೇ ಸಮಯದಲ್ಲಿ ನಿಶು ಹುಟ್ಟುವುದಕ್ಕೆ ಸ್ವಲ್ಪ ದಿನದ ಮುಂಚೆ ಹುಟ್ಟಿದ ಕವನ ಇದು.
`ನಿಮ್ಮಿಂದ ಬಂದರೂ ನಿಮ್ಮವರಲ್ಲ ನಾವು.....ಬದುಕಿನ ಬದುಕುವ ಬಯಕೆಯ ಸೃಷ್ಟಿಗಳು ನಾವು' ಎಂಬ ನನ್ನ ಪ್ರೀತಿಯ ಕವಿ ಖಲೀಲ್ ಗಿಬ್ರಾನ್‍ನ ಸಾಲುಗಳು ಯಾಕೋ ತುಂಬಾ ನೆನಪಿಗೆ ಬರುತ್ತಿದ್ದ ದಿನಗಳು ಅವು. ಕೊಟ್ಟು-ಕೊಳ್ಳುವ ಇಂತಹ ಬಿಡುಗಡೆ ನನ್ನದೂ ಆದೀತು ಒಮ್ಮೆ ಎಂದು ಅಂದುಕೊಳ್ಳುತ್ತಾ........


*********

ಅಂದ ಹಾಗೆ, ಯೂಟ್ಯೂಬ್‍ನಲ್ಲಿ ಒಂದಷ್ಟು ಮಕ್ಕಳ ಪದ್ಯಗಳ(ಕನ್ನಡ) ವೀಡಿಯೋ ನೋಡ್ದೆ. ಕೆಲವು ಚೆನ್ನಾಗಿವೆ. ಏನೇನೆಲ್ಲ ಸರ್ಕಸ್ ಮಾಡಿದರೂ ಇಲ್ಲಿ ಅಪ್‍ಲೋಡ್ ಮಾಡೋಕೆ ಆಗ್ತಿಲ್ಲ. ಸಧ್ಯದಲ್ಲೇ ನಿಮಗೂ ತೋರಿಸುವ ಆಸೆ ಇದೆ. ಈಗಲೇ ನೋಡಬೇಕು ಅನಿಸಿದ್ರೆ ಈ ಲಿಂಕ್ ಟ್ರೈ ಮಾಡಿ.

ಬ್ಲಾಗ್ ಅಪ್ಡೇಟ್ ಮಾಡು ಅಂತ ಕಾಮೆಂಟಿಸಿ, ನನಗೇ ನೇರ ಹೇಳಿ ನನ್ನನ್ನ ಎಬ್ಬಿಸಿದ ನಿಮಗೂ, ನಿಶೂನ ಅಜ್ಜಿ, ತಾತಂಗೂ ಥ್ಯಾಂಕ್ಸ್ ಹೇಳ್ತಾ, ನಿಮ್ಮಿಂದಲೇ ಈ ಬ್ಲಾಗು ಆಗೀಗ ಉಸಿರಾಡ್ತಾ ಇರೋದು ಅಂತ ಹೇಳ್ತಾ....ಬಹುಷಃ ಮುಂದಿನ ಪೋಸ್ಟ್ ಇಷ್ಟು ತಡವಾಗ್ಲಿಕ್ಕಿಲ್ಲ ಅಂತ ಸುಳ್ಳು ಸುಳ್ಳೇ ಭರವಸೆ ಕೊಟ್ಟುಬಿಡ್ಬೇಕು ಅನ್ನೋ ಆಸೆಯನ್ನ ಅದುಮಿಟ್ಟುಕೊಳ್ಳುತ್ತಾ ಈ ಪೋಸ್ಟ್ ಮಾಡ್ತಿದ್ದೀನಿ.

12 comments:

Jagali bhaagavata said...

Me,

Check this link - http://www.youtube.com/watch?v=Lvu6NpX0s_I

Then copy the link from - Embed on the right side, under about video section. Post the link as is in - Edit HTML - tab while creating a new post. I guess you can edit the width and height

ರಾಧಾಕೃಷ್ಣ ಆನೆಗುಂಡಿ. said...

nice.......

ಸುಪ್ತದೀಪ್ತಿ suptadeepti said...

ಮೀರಾ, YouTubeನಲ್ಲಿ ವಿಡಿಯೋದ ಪಕ್ಕದಲ್ಲಿ Embed ಅನ್ನುವ ಲಿಂಕ್ ಇದೆ. ಅಲ್ಲಿಂದ ವಿಡಿಯೋದ HTML code ತಂದು ಇಲ್ಲಿ New post windowದಲ್ಲಿ Edit HTML option ತಗೊಂಡು ಅಲ್ಲಿ ಅಂಟಿಸಿ... just try.

ravikumar.a said...

namasrte,
"preetiya gaalipatada
kavana oodi
manasu
maguvaaytu

haage: khhaleel gibran saalugulu nenapaadavu;

dhanyavaadagalu inthi nimma
ravikumar.a

Jagali bhaagavata said...

ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು ಅನ್ನೋ ಹಾಗೆ, ನಿಶುಮರಿ lazyboy ಆಗ್ಬಿಟ್ಟಿದಾನೆ ಅನ್ಸತ್ತೆ. ಇತ್ತೀಚೆಗೆ ತಿಂಗ್ಳಿಗೊಂದು ಪೋಸ್ಟ್ ಕೂಡ ಇಲ್ಲ :-(

nishu mane said...

ರಾಧಾಕೃಷ್ಣ ಮತ್ತು ರವಿಕುಮಾರ್ ಇಬ್ಬರಿಗೂ ಧನ್ಯವಾದಗಳು. ಹೀಗೇ ಆಗಾಗ ಇಲ್ಲಿ ಬರ್ತಾ ಇರಿ.

ಭಾಗವತರೆ ಸ್ವಲ್ಪ ಇರಿ. ಈಗಿನ್ನೂ ನ್ಯೂಜೆರ್ಸಿಗೆ ಮೂವ್ ಆಗಿ ಸುಧಾರಿಸಿಕೊಳ್ತಾ ಇದೀವಿ. ನನ್ನ ಕಂಪ್ಯೂಟರ್ನಲ್ಲಿ ಬೇರೆ ಅದ್ಯಾವ್ದೋ ಭೂತ ಸೇರಿಕೊಂಡಿರೋ ಹಾಗಿದೆ. ಅದರ ಉಚ್ಛಾಟನೆ ಆದ ಕೂಡ್ಲೆ ಕತ್ತೇನ ಕುದ್ರೆ ಮಾಡೋಕ್ಕಾಗತ್ತ ನೋಡ್ತೀನಿ.

(ಅಮ್ಮನ ತಪ್ಪಿಗೆ ತನ್ನನ್ನ ಕತ್ತೆ, ಕುದ್ರೆ, ಲೇಜ಼ಿಬಾಯ್ ಅಂತೆಲ್ಲ ಬೈದಿದ್ದಕ್ಕೆ ನಿಶೂಮರಿಗೆ ಸಿಟ್ಟು ಬಂದಿದೆ. ಏನು ದಂಡ ಕಟ್ತೀರಿ ಅವನಿಗೆ?...ಚಾಕ್ಲೇಟು, ಕೇಕು...ಯಾವ್ದಾದ್ರೂ ನಡೆಯತ್ತೆ.)

-ಮೀರ.

nishu mane said...

ಭಾಗವತರಿಗೂ, ಸುಪ್ತದೀಪ್ತಿ ಅವರಿಗೂ ಧನ್ಯವಾದಗಳು. ನಾನೂ ಈ ಹಿಂದೆ ನೀವು ಸೂಚಿಸಿರೋ ವಿಧಾನದಲ್ಲೇ, ಗೂಗಲ್ ವೀಡಿಯೋಗಳನ್ನ ಬ್ಲಾಗ್-ನಲ್ಲಿ ಹಾಕಿದ್ದೆ. ಈ ಸಲ ಯಾಕೋ ಅದು ಆಗ್ತಿಲ್ಲ. ನನ್ನ ಪಿಸೀದೇ ಏನೋ ತೊಂದರೆ ಇರ್ಬೇಕು. ಸರಿ ಆದ ಕೂಡ್ಲೇ ಮತ್ತೆ ಟ್ರೈ ಮಾಡ್ತೀನಿ. ಥ್ಯಾಂಕ್ಯೂ.

-ಮೀರ.

ಕುಕೂಊ.. said...

ಕವನ ತುಂಬಾ ಚನ್ನಾಗಿದೆ.

ಧನ್ಯವಾದಗಳು
ಸ್ವಾಮಿ
ಪುಣೆ

nishu mane said...

Thanks kumara swamy avare. nammanege bartaa iri.

-Meera.

Pretty said...

today was the first time I entered the world of blogs. Nimma Nishimariya haadugalannu nodi aanadavaaytu. Maneyalliye kulitu madabahudada aanadadayaka jagattattige nanna kannu teresidiri.

danyavadagalu

nishu mane said...

Thank you Preeti. nammanege heege bartaa iri.

-Meera.

ಮನಸ್ವಿ said...

ಕವನ ತುಂಬಾ ಮುದ್ದಾಗಿ ಮೂಡಿ ಬಂದಿದೆ...